ಉಳ್ಳಾಲ ಉರೂಸ್ – ಟಿ ಎಂ ಶಾಹೀದ್ ತೆಕ್ಕಿಲ್ ಅವರಿಗೆ ಸನ್ಮಾನ…
ಮಂಗಳೂರು: ಉಳ್ಳಾಲ ಸಯ್ಯದ್ ಮದನಿ ದರ್ಗಾ ಷರೀಫ್ 429ನೇ 21ನೆ ಪಂಚ ವಾರ್ಷಿಕ ಉರೂಸ್ ಸಮಾರಂಭದಲ್ಲಿ ಶಿಕ್ಷಣ ಹಾಗು ಸಮಾಜಿಕ ಕ್ಷೇತ್ರದಲ್ಲಿ ಅಪ್ರತಿಮ ಸೇವೆ ಸಲ್ಲಿಸಿದ ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷರಾದ ಟಿ ಎಂ ಶಾಹೀದ್ ತೆಕ್ಕಿಲ್ ರವರನ್ನು ಸಯ್ಯದ್ ಮದನಿ ದರ್ಗಾ ಶರೀಫ್ ಸಮಿತಿ ಅಧ್ಯಕ್ಷರಾಗಿರುವ ರಶೀದ್ ಹಾಜಿ ಯವರು ಸನ್ಮಾನಿಸಿದರು.
ಈ ಸಂಧರ್ಭದಲ್ಲಿ ಮದನಿ ಕಾಲೇಜ್ ಪ್ರಿನ್ಸಿಪಾಲ್ ಉಸ್ಮಾನ್ ಫೈಝಿ, ಖಲೀಲ್ ಹುದವಿ, ಯು ಕೆ ಮೋನು, ಫಾರೂಕ್ ಉಳ್ಳಾಲ್, ಮುಸ್ತಫ ಅಬ್ದುಲ್ಲ, ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ ಕೆ ಹಮೀದ್ ಗೂನಡ್ಕ, ಸದಸ್ಯರಾದ ಎಸ್ ಕೆ ಹನೀಫ್ ಮೊದಲಾದವರು ಉಪಸ್ಥಿತರಿದ್ದರು.