ಧೀರಜ್ ಹೆಬ್ರಿ ಅವರಿಗೆ ಡಾಕ್ಟರೇಟ್…

ಬಂಟ್ವಾಳ: ಮಂಗಳೂರು ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಉದ್ಯೋಗ ಮತ್ತು ತರಬೇತಿ ವಿಭಾಗದ ಮುಖ್ಯಸ್ಥರಾದ ಧೀರಜ್ ಹೆಬ್ರಿ ಅವರು ಮಂಡಿಸಿದ ಕಲರ್ ಬೇಸ್‌ಡ್ ಕ್ಲಾಸ್ಸಿಫಿಕೇಷನ್ ಆಫ್ ಫುಡ್ ಗ್ರೈನ್ ವೆರೈಟೀಸ್ ಯೂಸಿಂಗ್ ಆರ್ಟಿಫಿಷಿಯಲ್ ನ್ಯೂರಲ್ ನೆಟ್‌ವರ್ಕ್ ಎಂಬ ಸಂಶೋಧನಾ ಪ್ರಬಂಧಕ್ಕಾಗಿ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದಿಂದ ಪಿಎಚ್‌ಡಿ ಪದವಿಗೆ ಭಾಜನರಾಗಿರುತ್ತಾರೆ.
ಧೀರಜ್ ಅವರು ಬಂಟ್ವಾಳದ ನಿವೃತ್ತ ರೈಲು ನಿಲ್ದಾಣಾಧಿಕಾರಿ ಎಚ್. ರವಿಶಂಕರ್ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಯ ಶಿಕ್ಷಣ ಸಂಯೋಜಕಿ ಸುಜಾತಾ ಕುಮಾರಿಅವರ ಪುತ್ರರಾಗಿರುತ್ತಾರೆ.ಅವರು ಪ್ರಸ್ತುತ ಬಂಟ್ವಾಳ ಲಯನ್ಸ್ ಕ್ಲಬ್‌ನ ಕಾರ್ಯದರ್ಶಿಯಾಗಿದ್ದಾರೆ.