ಸಂಚಾರಿ ವಿಜಯ್ ಮೆದುಳು ನಿಷ್ಕ್ರಿಯ, ಅಂಗಾಂಗ ದಾನ…

ಬೆಂಗಳೂರು: ಜೂ.12 ರಂದು ರಾತ್ರಿ ಅಪಘಾತಕ್ಕೀಡಾಗಿ ಚಿಕಿತ್ಸೆ ಪಡೆಯುತ್ತಿದ್ದ ನಟ ಸಂಚಾರಿ ವಿಜಯ್ ಅವರ ಮೆದುಳು ನಿಷ್ಕ್ರಿಯಗೊಂಡಿದ್ದು, ಕುಟುಂಬ ಸದಸ್ಯರ ನಿರ್ಧಾರದಂತೆ ಇಂದು ರಾತ್ರಿ ಅಂಗಾಂಗ ದಾನ ಪ್ರಕ್ರಿಯೆ ನಡೆಯಲಿದೆ.

ಸಂಚಾರಿ ವಿಜಯ್ ಅವರ ಮೆದುಳಿಗೆ ಸಂಬಂಧಿಸಿದಂತೆ ಎರಡು ಅಪ್ನಿಯಾ ಟೆಸ್ಟ್ ಮಾಡಲಾಗಿದ್ದು, ವಿಜಯ್ ಅವರ ಮೆದುಳು ನಿಷ್ಕ್ರಿಯಗೊಂಡಿರುವುದು ದೃಢಪಟ್ಟಿದ್ದು, ಬ್ರೈನ್ ಡೆಡ್ ಆಗಿದೆ ಎಂದು ಅಪೋಲೋ ಆಸ್ಪತ್ರೆಯ ವೈದ್ಯ ಡಾ. ಅರುಣ್ ನಾಯ್ಕ್ ಮಾಹಿತಿ ನೀಡಿದ್ದಾರೆ.
ಬೆಳಿಗ್ಗೆ ವೇಳೆಗೆ ವಿಜಯ್ ಅವರ ಮೃತದೇಹ ಕುಟುಂಬ ಸದಸ್ಯರಿಗೆ ಹಸ್ತಾಂತರವಾಗಲಿದ್ದು, ಬೆಳಿಗ್ಗೆ 8-10 ವೇಳೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ನಂತರ ವಿಜಯ್ ಅವರ ಹುಟ್ಟೂರಾದ ಚಿಕ್ಕಮಗಳೂರಿನ ಕಡೂರಿನ ಪಂಚನಹಳ್ಳಿಯಲ್ಲಿ ಅಂತ್ಯಸಂಸ್ಕಾರ ನಡೆಸಲಾಗುತ್ತದೆ ಎಂದು ತಿಳಿದುಬಂದಿದೆ.

Related Articles

Back to top button