ಶ್ರೀ ಮದ್ ಭಗವದ್ಗೀತೆ ಚುಟುಕು ಸಾಹಿತ್ಯಕ್ಕೆ ಮೂಲ- ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದ…

ಉಡುಪಿ: ಶ್ರೀ ಕೃಷ್ಣ ಪರಮಾತ್ಮ ಸಾರಿದ ಶ್ರೀ ಮದ್ ಭಗವದ್ಗೀತೆ ಇಂದಿನ ಸರಳ ಶೈಲಿಯ ಚುಟುಕು ಸಾಹಿತ್ಯಕ್ಕೆ ಮೂಲ ಎಂದು ಕೃಷ್ಣಮಠದ ಪರ್ಯಾಯ ಶ್ರೀ ಪುತ್ತಿಗೆಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹೇಳಿದರು.

ಅವರು ನಗರದ ರಾಜಾಂಗಣ ಸಭಾಂಗಣದಲ್ಲಿ ಭಾನುವಾರ ಬೆಳಿಗ್ಗೆ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಕೃಷ್ಣಮಠದ ಸಹಕಾರದಿಂದ ಸಂಘಟಿಸಿದ ಕರಾವಳಿ ಕರ್ನಾಟಕ ಐದನೆಯ ಸಮ್ಮೇಳನಕ್ಕೆ ದೀಪ ಪ್ರಜ್ವಲನೆ ಮಾಡಿ ಆಶೀರ್ವಚನ ನೀಡಿ ಮಾತನಾಡುತ್ತಿದ್ದರು.
ಸಮಸ್ಥ ಸಮಾಜವಿಂದು ಸಮಯದ ಕೊರತೆಗೆ ಒಳಗಾಗಿದೆ. ಸುಧೀರ್ಘ ಪುಸ್ತಕಗಳನ್ನು ಓದುವ ವ್ಯವಧಾನ ಬಹುತೇಕ ಯಾರಲ್ಲೂ ಉಳಿದಿಲ್ಲ, ಇಂತಹ ಸಂದರ್ಭಗಳಲ್ಲಿ ಚುಟುಕು ಸಾಹಿತ್ಯ ಅಗತ್ಯ ಹಾಗೂ ಅನಿವಾರ್ಯ ಎಂದು ಹೇಳಿದರು.
ರಾಷ್ಟ್ರೀಯ ಮಟ್ಟದಲ್ಲಿ ಕಚುಸಾಪ ಮಹತ್ತರ ಕಾರ್ಯಕ್ರಮ ರೂಪಿಸಿದ್ದು ಸ್ವಾಗತಾರ್ಹ, ಅವರ ಧಾರ್ಮಿಕ ಚಿಂತನೆಗಳಿಗೆ ಕೃಷ್ಣಮಠ ಮುಕ್ತ ಸಹಕಾರ ನೀಡುತ್ತದೆ ಎಂದು ಶುಭ ಹಾರೈಸಿದರು.
ಪುತ್ತಿಗೆಮಠದ ಕಿರಿಯ ಶ್ರೀ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಪ್ರೊ.ಜಿ.ಯು.ನಾಯಕ ಅವರ ಸಂಜೆ ಮಲ್ಲಿಗೆ, ಎನ್.ವಿ.ರಮೇಶರ ಕಾಶೀಯಾತ್ರೆ ಹಾಗೂ ಕೃಷ್ಣ ಪದಕಿ ಅವರ ಸಂದಕುಮಾರನ ಕಗ್ಗಗಳು ಪುಸ್ತಕಗಳನ್ನು ಅನಾವರಣಗೊಳಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಾಹಿತ್ಯ ಚಿಂತನ ಮಂಥನ ನಡೆಸುವುದು ಇಂದು ಅಗತ್ಯವಾಗಿದೆ ಎಂದು ಹೇಳಿದರು.
ಸರ್ವಾಧ್ಯಕ್ಷರಾದ ಧರ್ಮದರ್ಶಿ ಹಿರಿಯ ಚಿಂತಕ ಡಾ.ಹರಿಕೃಷ್ಣ ಪುನರೂರು, ಪ್ರೊ.ಜಿ.ಯು. ನಾಯಕ ಅವರಿಂದ ಅಧಿಕಾರ ಸ್ವೀಕಾರ ಮಾಡಿದರು. ಸಾಹಿತ್ಯ ನಿಂತ ನೀರಾಗದೇ ಅದು ನಿರಂತರ ಹರಿಯುವ ನೀರಾಗಬೇಕೆಂದು ಹೇಳಿದರು.ಜನಪರ ಕಾಳಜಿಗೆ ಇಂದು ಸಮಗ್ರ ಸಾಹಿತ್ಯ ಸ್ಪಂದಿಸಬೇಕಾಗಿದೆ ಎಂದು ಹೇಳಿದರು.
ಇದೇ ಸಮಯದಲ್ಲಿ ಸುಗುಣೇಂದ್ರ ತೀರ್ಥ ಶ್ರೀ ಪಾದರಿಗೆ ಹಾಗೂ ಹರಿಕೃಷ್ಣ ಪುನರೂರು ಅವರಿಗೆ ” ವಿಶ್ವಗೀತಾ ಪರ್ಯಾಯ ಕೃಷ್ಣಾನುಗ್ರಹ” ಗೌರವ ಪ್ರಶಸ್ತಿ ನೀಡಿ ಗೌರವಿಸಿತು.
ಪ್ರಾರಂಭದಲ್ಲಿ ಮಹಿಳಾ ಘಟಕದ ಡಾ.ವಂದನಾ ರಮೇಶ ಗಣೇಶ ಸ್ತುತಿ ಹಾಡಿದರು. ಕಾಸರಗೋಡು ಗುರುರಾಜ ಹಾಗೂ ವಂದನಾ ಅವರು ನಾಡಗೀತೆ ಹಾಡಿದರು. ಉಡುಪಿ ಘಟಕದ ಉಪಾಧ್ಯಕ್ಷ ರಾಜು ಎನ್.ಆಚಾರ್ಯ ಅವರು ಸ್ವಾಗತಿಸಿದರು. ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ಪ್ರಾಸ್ತಾವಿಕ ನುಡಿ ಹೇಳಿ ವೈಚಾರಿಕ ಚಿಂತನೆ,ಧಾರ್ಮಿಕ ವಿಚಾರಗಳನ್ನು ಕಷುಸಾಪ ನಿರಂತರವಾಗಿ ಸ್ಪಂದಿಸುತ್ತದೆ ಎಂದು ಹೇಳಿದರು.
ಮಂಗಳೂರು ಘಟಕದ ಅಧ್ಯಕ್ಷ ಜಯಾನಂದ ಪೆರಾಜೆ,ಕಾರ್ಯದರ್ಶಿ ಶಾಂತಾ ಚಂದ್ರಶೇಖರ ನಿರೂಪಿಸಿದರು.
ವಿಚಾರಗೋಷ್ಟಿ- ಮೈಸೂರಿನ ಎನ್.ವಿ.ರಮೇಶ ಅಧ್ಯಕ್ಷತೆಯಲ್ಲಿ ಡಾ.ಶತಾವಧಾನಿ ರಾಮನಾಥ ಆಚಾರ್ಯ ಉಡುಪಿ ಅವರು ದಿಕ್ಚ್ಯುಚಿ ನುಡಿ ನುಡಿದರು.
ಪಂಡಿತರಾದ ರಘುಪತಿ ಭಟ್ ಮಂಗಳೂರು, ಗಣಪತಿ ಭಟ್ಟರು ವರ್ಗಾಸರ ಉಪನ್ಯಾಸ ನೀಡಿದರು.
ಸಮಗ್ರ ಗಹನ ಚಿಂತನ ಇಲ್ಲಿ ನಡೆಯಿತು. ಉಡುಪಿ ಕಾರ್ಯದರ್ಶಿ ಸೋಮಶೇಖರ್ ಶೆಟ್ಟಿ ನಿರೂಪಿಸಿದರು.
ನಂತರ ” ಕೃಷ್ಣನಗುಂಗು” ಕವಿಗೋಷ್ಟಿ- ಹಿರಿಯ ಕವಿ ಪ್ರೊ.ಉಪೇಂದ್ರ ಸೋಮಯಾಜಿ ಅಧ್ಯಕ್ಷತೆಯಲ್ಲಿ ಜರುಗಿತು. ಕೃಷ್ಣ ಪದಕಿ, ಡಾ.ವಂದನಾ ರಮೇಶ ಮುಖ್ಯ ಅತಿಥಿಗಳಾಗಿದ್ದರು. ಮಂಗಳೂರು ಘಟಕದ ರೇಖಾ ಸುದೇಶರಾವ್ ನಿರೂಪಿಸಿದರು. ಇಪ್ಪತ್ತು ಜನ ಕವಿಗಳು ಕವನ ವಾಚನ ಮಾಡಿದರು.

whatsapp image 2024 05 05 at 9.20.43 pm (1)

whatsapp image 2024 05 05 at 9.20.44 pm

Sponsors

Related Articles

Back to top button