ಅಲ್ – ರಿಫ಼ಾಯಿಯ್ಯ ನೂರುಲ್ ಇಸ್ಲಾಂ ಮದ್ರಸ ಮರಕಡ ಕುಂಜತ್ ಬೈಲ್ SBS 2023 -24 ನೂತನ ಸಮಿತಿ ಅಸ್ತಿತ್ವಕ್ಕೆ….
ಮಂಗಳೂರು: ಅಲ್ ರಿಫ಼ಾಯಿಯ್ಯ ನೂರುಲ್ ಇಸ್ಲಾಂ ಮದ್ರಸ ಮರಕಡ ಇದರ ಅಧೀನದಲ್ಲಿ SBS -2023-24 ನೇ ಸಾಲಿನ ನೂತನ ಕಮಿಟಿ ಜು.19 ರಂದು ಸದರ್ ಉಸ್ತಾದ್ ರಿಹಾನ್ ಸ-ಅದಿಯವರ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದಿತು.
ನೆರೆದಿರುವ ಸರ್ವರನ್ನು SBS ಪ್ರಧಾನ ಕಾರ್ಯದರ್ಶಿ 8 ನೇ ತರಗತಿ ವಿದ್ಯಾರ್ಥಿ ನೌಶಾದ್ ಸ್ವಾಗತಿಸಿ, ಖತೀಬ್ ಉಸ್ತಾದರಾದ ಅನ್ಸಾರ್ ಸಖಾಫ಼ಿ ಮುಕ್ವೆಯವರು ಉದ್ಘಾಟನೆಯನ್ನು ನೆರವೇರಿಸಿದರು . ನಂತರ 9 ಮಂದಿಯನ್ನೊಳಗೊಂಡ ನೂತನ ಸಮಿತಿಯನ್ನು ಘೋಷಿಸಲಾಯಿತು.
ಅಧ್ಯಕ್ಷರಾಗಿ ಅಮೀಝ್ ಹಬೀಬುಲ್ಲಾಹ್ ಪ್ರಧಾನ ಕಾರ್ಯದರ್ಶಿಯಾಗಿ ನೌಶಾದ್ ಹಾಗೂ ಫ಼ಿನಾನ್ಸ್ ಕಾರ್ಯದರ್ಶಿಯಾಗಿ ರಿಶಾನ್ ರವರನ್ನು ಆಯ್ಕೆಮಾಡಲಾಯಿತು.
ಉಪಾಧ್ಯಕ್ಷರಾಗಿ ಶುಹೈಬ್ & ಹಾಫ಼ಿಳ್ ಹಸನ್ ಜೊತೆ ಕಾರ್ಯದರ್ಶಿಯಾಗಿ ಅಫ಼ಾನ್ & ಮುನಾಝ್ ರವರನ್ನು ಆರಿಸಲಾಯಿತು.
ನಂತರ ಎಲ್ಲಾ ವಿದ್ಯಾರ್ಥಿಗಳನ್ನು 2 ತಂಡಗಳಾಗಿ ವಿಂಗಡಿಸಿ ತಂಡದ ನಾಯಕರನ್ನಾಗಿ ದಿಲ್ಶಾದ್ & ಹಸನ್ ಸಅದ್ ನಾಯಕಿಯರನ್ನಾಗಿ ಅನ್ಸಿಯಾ & ಆಯಿಶಾ ರವರನ್ನು ನೇಮಕ ಮಾಡಲಾಯಿತು.
ನಂತರ 2ವಾರಕ್ಕೊಮ್ಮೆ ನಡೆಯುವ SBS ನ ರೂಪುರೇಷೆಗಳನ್ನು ಮುಅಲ್ಲಿಮರಾದ ತಾಜುದ್ದೀನ್ ಮಿಸ್ಬಾಹಿ & ಮುಹಮ್ಮದ್ ಅಲಿ ಸಖಾಫ಼ಿಯವರು ಮುಂದಿಟ್ಟರು.