ಪ್ರಧಾನಿ ನರೇಂದ್ರ ಮೋದಿ ಅವರ ಆರೋಗ್ಯ ,ಆಯುಷ್ಯ ವೃದ್ಧಿಗಾಗಿ ಶ್ರೀ ಬಾಲಗಣಪತಿ ಹೋಮ…

ಬಂಟ್ವಾಳ: ಶ್ರೀ ಬಾಲಗಣಪತಿ ದೇವಸ್ಥಾನ ಅನ್ನಪಾಡಿ ಸಜಿಪಮೂಡ ಇಲ್ಲಿ ಮಂಗಳವಾರದಂದು ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಆರೋಗ್ಯ – ಆಯುಷ್ಯ ವೃದ್ಧಿಸಲು, ಶತ್ರು ಬಾದೆ ಪರಿಹಾರವಾಗಲು, ದೇಶವನ್ನು ಇನ್ನಷ್ಟು ಕಾಲ ಸಮರ್ಥವಾಗಿ ಮುನ್ನಡೆಸಲು ಶಕ್ತಿ – ಸಾಮರ್ಥ್ಯ ಬುದ್ಧಿ ಅನುಗ್ರಹ ಸಂಕಲ್ಪದೊಂದಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮೋರ್ಚಾ ಬಿಜೆಪಿ ಬಂಟ್ವಾಳ ವತಿಯಿಂದ ಶ್ರೀ ಬಾಲಗಣಪತಿ ಹೋಮ ಸಜಿಪಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಜರಗಿತು.
ಯಶವಂತ ದೇರಾಜೆ ಗುತ್ತು, ಸುರೇಶ್ ಬಂಗೇರ, ಗಣೇಶ್ ಚೇಳೂರು, ರಮೇಶ ಅನ್ನಪಾಡಿ, ಪದ್ಮಾವತಿ ಪೂಜಾರಿ, ಶಂಕರ್ ಭಟ್, ಕೇಶವ ಭಟ್, ಅಭಯ ಭಟ್, ಲಿಂಗಪ್ಪ ಮೂಲ್ಯ, ಎಸ್ಟಿ ಎಸ್ಸಿ ಬಿಜೆಪಿ ಮೋರ್ಚ ಬಂಟ್ವಾಳ ಮಂಡಲ ಅಧ್ಯಕ್ಷ ರಾಮ ನಾಯ್ಕ , ಉಪಾಧ್ಯಕ್ಷ ಮನೋಜ್, ಪ್ರಧಾನ ಕಾರ್ಯದರ್ಶಿ ಯಶವಂತ ನಗ್ರಿ ಮೊದಲಾದವರು ಉಪಸ್ಥಿತರಿದ್ದರು.

Related Articles

Back to top button