ಪತ್ನಿಯರ ವಿನಿಮಯ ದಂಧೆ – 7 ಮಂದಿ ಅರೆಸ್ಟ್​…

ಕೊಟ್ಟಾಯಂ: ಕೇರಳದಲ್ಲಿ ಲೈಂಗಿಕ ವಾಂಛೆ ತೀರಿಸಿಕೊಳ್ಳಲು ‘ಪತ್ನಿಯರ ವಿನಿಮಯ’ ಮಾಡಿಕೊಳ್ಳುವ ದಂಧೆಗಾಗಿ ವಿವಿಧ ರೀತಿಯ ಅಂತರ್ಜಾಲ ಗ್ರೂಪ್​ ರಚಿಸಿಕೊಂಡ ಪ್ರಕರಣ ಬೆಳಕಿಗೆ ಬಂದಿದೆ. ಮಹಿಳೆಯೊಬ್ಬರು ಈ ಬಗ್ಗೆ ದೂರು ನೀಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ 7 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಕೇರಳದ ಕೊಟ್ಟಾಯಂ ಜಿಲ್ಲೆಯ ಕರುಕಾಚಲ್​ನಲ್ಲಿ ಹಣ ಮತ್ತು ಲೈಂಗಿಕತೆಗಾಗಿ ಪತ್ನಿಯರ ವಿನಿಮಯ ಮಾಡಿಕೊಳ್ಳಲೆಂದೇ ಟೆಲಿಗ್ರಾಂ, ಮೆಸೆಂಜರ್ ಗ್ರೂಪ್​ ರಚನೆ ಮಾಡಿಕೊಂಡಿದ್ದಾರೆ. ಹಣಕ್ಕಾಗಿ ತಮ್ಮ ಹೆಂಡತಿಯರನ್ನು ಪರ ಪುರುಷರ ಜೊತೆ ವಿನಿಮಯ ಮಾಡಿಕೊಳ್ಳುತ್ತಿದ್ದರು.ಈ ಗುಂಪುಗಳಲ್ಲಿ ಸಿರಿವಂತ ಕುಟುಂಬದವರೇ ಇದ್ದಾರೆ ಎಂದು ಹೇಳಲಾಗುತ್ತಿದೆ.
ಕೇರಳದ ಮೂರು ಜಿಲ್ಲೆಯ 1 ಸಾವಿರಕ್ಕೂ ಅಧಿಕ ಜನರು ಈ ಗುಂಪುಗಳ ಸದಸ್ಯರಾಗಿದ್ದಾರೆ. ಹಣ ಮತ್ತು ಲೈಂಗಿಕ ಸುಖಕ್ಕಾಗಿ ತಮ್ಮ ಪತ್ನಿಯನ್ನು ಬೇರೆ ಗಂಡಸರ ಜೊತೆ ವಿನಿಮಯ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಗುಂಪುಗಳ ಮೇಲೆ ತೀವ್ರ ನಿಗಾ ಇರಿಸಿದ್ದು, ಇವರು ಬೇರೆ ಗುಂಪುಗಳ ಜೊತೆ ಸಂಪರ್ಕ ಹೊಂದಿದ್ದಾರಾ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Sponsors

Related Articles

Back to top button