ಕೇಂದ್ರ ಸಚಿವ ಸಂಪುಟದಲ್ಲಿ ಮುಸ್ಲಿಂ ಸಮುದಾಯದ ಕಡೆಗಣನೆ- ಟಿ.ಎಂ ಶಹೀದ್ ತೆಕ್ಕಿಲ್ ಖಂಡನೆ…

ಸುಳ್ಯ:ಇತ್ತೀಚೆಗೆ ರಚನೆಯಾದ ನರೇಂದ್ರಮೋದಿಯವರ ಕೇಂದ್ರ ಸಚಿವ ಸಂಪುಟದಲ್ಲಿ ಮುಸ್ಲಿಂ ಸುಮುದಾಯದ ಒಬ್ಬರನ್ನೂ ಮಂತ್ರಿ ಮಾಡದೆ ಘೋರ ಅನ್ಯಾಯವೆಸಗಲಾಗಿದೆ ಎಂದು ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ ಶಹೀದ್ ತೆಕ್ಕಿಲ್ ಟೀಕಿಸಿದ್ದಾರೆ.
ದೇಶದ ಬಹುದೊಡ್ದ ಸಮುದಾಯವನ್ನು ಹೊಂದಿರುವ ಮತ್ತು 30 ಕೋಟಿಯಷ್ಟು ಮುಸಲ್ಮಾನರು ಇರುವ ಭಾರತದಲ್ಲಿ ಮುಸ್ಲಿಂ ಸಮುದಾಯಕ್ಕೆ ಮಂತ್ರಿ ಸ್ಥಾನ ನೀಡದೆ ಇರುವುದು ಪ್ರಜಾಪ್ರಭುತ್ವಕ್ಕೆ ಮತ್ತು ಜಾತ್ಯತೀತ ಭಾರತದ ಜನತೆಗೆ ಮಾಡಿದ ದ್ರೋಹ ಮಾತ್ರವಲ್ಲದೆ ಇದು ಕೇಂದ್ರ ಸರಕಾರದ ಅಲ್ಪಸಂಖ್ಯಾತರ ವಿರೋಧಿ ನಡೆಯಾಗಿದೆ ಎಂದು ಟಿ.ಎಂ ಶಹೀದ್ ತೆಕ್ಕಿಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.