ದ.ಕ. ಜಿಲ್ಲೆ- ಸೋಮವಾರವೂ ಕೊರೊನ ನೆಗೆಟಿವ್…

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಇಂದು ಒಟ್ಟು 14 ಸ್ಯಾಂಪಲ್ ಗಳ ಪರೀಕ್ಷಾ ವರದಿ ಲಭ್ಯವಾಗಿದ್ದು, ಅದರಲ್ಲಿ 9 ನೆಗೆಟಿವ್ ವರದಿ ಲಭಿಸಿದೆ. ಇನ್ನು ಐದು ಮಂದಿಯ ಪರೀಕ್ಷಾ ವರದಿ ನಿರೀಕ್ಷಿಸಲಾಗಿದೆ.
ದ.ಕ. ಜಿಲ್ಲೆಯಲ್ಲಿ ಶನಿವಾರ, ರವಿವಾರ ಮತ್ತು ಇಂದು ಲಭಿಸಿದ ಪರೀಕ್ಷಾ ವರದಿಗಳೆಲ್ಲ ನೆಗೆಟಿವ್ ಆಗಿದೆ. ಜಿಲ್ಲಾಡಳಿತ, ಆರೋಗ್ಯ ಇಲಾಖೆ ಹಾಗೂ ಪೊಲೀಸರು ವಹಿಸಿಕೊಂಡಿರುವ ನಿಗಾದಿಂದಾಗಿ ಈ ಫಲಿತಾಂಶ ಸಾಧ್ಯವಾಗಿದೆ.
Sponsors