ಒಡಿಯೂರು ತುಳುನಾಡು ಜಾತ್ರೆ- ಪೂರ್ವಭಾವಿ ಸಭೆ….

ವಿಟ್ಲ: ಫೆಬ್ರವರಿ ತಿಂಗಳಿನಲ್ಲಿ ಒಡಿಯೂರಿನಲ್ಲಿ ನಡೆಯುವ ರಥೋತ್ಸವ ತುಳುನಾಡ ಜಾತ್ರೆಯಾಗಿ ನಡೆಸುವ ಸಲುವಾಗಿ ಕ್ಷೇತ್ರದ ಅಭಿಮಾನಿಗಳ ಸಭೆ ಇಂದು ಶ್ರೀ ಕ್ಷೇತ್ರದಲ್ಲಿ ಜರಗಿತು.
ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ಸಮಾರಂಭದ ಅಧ್ಯಕ್ಷತೆ ವಹಿಸಿ, ಆಶೀರ್ವಚನ ನೀಡಿದರು.
ಸಾಧ್ವಿ ಶ್ರೀ ಮಾತಾನಂದಮಯಿ , ಹಿರಿಯ ಸಾಹಿತಿ ವಸಂತ ಕುಮಾರ್ ಪೆರ್ಲ, ಮಲಾರು ಜಯರಾಮ ರೈ, ಅಶೋಕ್ ಕುಮಾರ್ ಬಿಜೈ , ರಘುನಾಥ ಶೆಟ್ಟಿ, ಸೇರಾಜೆ ಗಣಪತಿ ಭಟ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.