ಸ್ವಚ್ಚತೆಯು ಗಾಂಧಿಗೆ, ದೇಶಕ್ಕೆ ಹಾಗೂ ನಮಗೆ ನಾವು ಕೊಡುವ ಗೌರವ-ಎ.ಸಿ.ಕೃಷ್ಣಮೂರ್ತಿ….
ಪುತ್ತೂರು: ವಿಶ್ವದ ಆದರ್ಶವಾಗಿರುವ ಗಾಂಧಿ ಬದುಕಿನಲ್ಲಿನ ಸಣ್ಣ ಸಣ್ಣ ಘಟನೆಗಳು ಪರಿವರ್ತನೆಗೆ ಕಾರಣವಾಯಿತು. ಸ್ವಚ್ಚತೆ ಎನ್ನುವುದು ಗಾಂಧಿಗೆ, ದೇಶಕ್ಕೆ ಹಾಗೂ ನಮಗೆ ನಾವು ಕೊಡುವ ಗೌರವವಾಗಿದೆ. ಹಾಗೆಂದು ಗಾಂಧಿ ಸ್ವಚ್ಛತೆಗೆ ಮಾತ್ರ ಸೀಮಿತ ಅಲ್ಲ. ಅವರು ಸೌಹಾರ್ದತೆಯ ಬದುಕಿಗೆ ಪ್ರೇರಕ ಎಂದು ಪುತ್ತೂರು ಉಪವಿಭಾಗಾಧಿಕಾರಿ ಹೆಚ್,ಕೆ,ಕೃಷ್ಣಮೂರ್ತಿ ಹೇಳಿದರು.
ಪುತ್ತೂರು ಕಿಲ್ಲೆ ಮೈದಾನದಲ್ಲಿ ಬುಧವಾರ ನಗರಸಭಾ ವತಿಯಿಂದ ಆಯೋಜಿಸಲಾದ `ಸ್ವಚ್ಛತಾ ಹಿ ಸೇವಾ ‘ ಕಾರ್ಯಕ್ರಮಕ್ಕೆ ಅವರು ಚಾಲನೆ ನೀಡಿ ಮಾತನಾಡಿದರು.
ನಗರಸಭಾ ಪೌರಾಯುಕ್ತೆ ರೂಪಾ ಶೆಟ್ಟಿ ಮಾತನಾಡಿ, ಪುತ್ತೂರು ನಗರವನ್ನು `ಸುಂದರನಗರ’ವನ್ನಾಗಿಸುವ ನಗರಸಭೆಯ ಕನಸಿಗೆ ಜನತೆಯ ಪ್ರೋತ್ಸಾಹ ಅತ್ಯಗತ್ಯ. ಪ್ಲಾಸ್ಟಿಕ್ ಮುಕ್ತ ಪುತ್ತೂರು ನಗರಕ್ಕೆ ಮುನ್ನುಡಿ ಬರೆಯುವ ಕೆಲಸಕ್ಕೆ ಎಲ್ಲರ ಸಹಕಾರ ಬೇಕಾಗಿದೆ ಎಂದರು.
ತಹಶೀಲ್ದಾರ್ ಅನಂತಶಂಕರ, ತಾಲೂಕು ಆರೋಗ್ಯಾಧಿಕಾರಿ ಡಾ.ಅಶೋಕ್ ಕುಮಾರ್ ರೈ, ನಗರಸಭಾ ಸದಸ್ಯರಾದ ಪಿ.ಜಿ.ಜಗನ್ನಿವಾಸ್, ಗೌರಿ ಬನ್ನೂರು, ಮಮತಾ ರಂಜನ್, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣುಪ್ರಸಾದ್, ತಾಲೂಕು ಯುವಸಬಲೀಕರಣ ಮತ್ತು ಕ್ರೀಡಾಧಿಕಾರಿ ಎಂ.ಮಾಮಚ್ಚನ್, ಅಕ್ಷರ ದಾಸೋಹದ ಪುತ್ತೂರು ತಾಲೂಕು ಸಹಾಯಕ ನಿರ್ದೇಶಕ ಸುರೇಶ್ ಕುಮಾರ್, ಶಾಲಾ ಪರಿವೀಕ್ಷಣಾಧಿಕಾರಿ ಸುಂದರ ಗೌಡ, ಸಿಆರ್‍ಪಿ ದೇವಕಿ, ಸಾಮಾಜಿಕ ಅರಣ್ಯ ಇಲಾಖೆ ಸಹಾಯಕ ನಿರ್ದೇಶಕಿ ವಿದ್ಯಾರಾಣಿ, ನಗರಸಭಾ ಎಂಜಿನಿಯರ್ ಅರುಣ್, ಆರೋಗ್ಯ ನಿರೀಕ್ಷಕರಾದ ರಾಮಚಂದ್ರ, ಶ್ವೇತಾ ಕಿರಣ್, ಜೇಸಿ ಅಧ್ಯಕ್ಷ ಗೌತಮ್ ರೈ, ಕೃಷ್ಣಪ್ರಸಾದ್ ಆಳ್ವ ಮತ್ತಿತರರು ಹಾಜರಿದ್ದರು. ಮಹಿಳಾ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಝೇವಿಯರ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.