ಮೀಫ್ ವತಿಯಿಂದ ಮೌಲಾನ ಅಬುಲ್ ಕಲಾಂ ಅಜಾದ್ ಜನ್ಮ ದಿನಾಚರಣೆ ಅಂಗವಾಗಿ ರಾಷ್ಟ್ರೀಯ ಶಿಕ್ಷಣ ದಿನಾಚರಣೆ…

ಮೂಡುಬಿದ್ರಿ: ದ. ಕ. ಮತ್ತು ಉಡುಪಿ ಜಿಲ್ಲೆಗಳ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ಮೀಫ್) ಮತ್ತು ಆದರ್ಶ ಆಂಗ್ಲ ಮಾಧ್ಯಮ ಶಾಲೆ ಇದರ ಸಹಯೋಗದಲ್ಲಿ ಮೌಲಾನ ಅಬುಲ್ ಕಲಾಂ ಅಜಾದ್ ಜನ್ಮ ದಿನಾಚರಣೆ ಅಂಗವಾಗಿ ರಾಷ್ಟ್ರೀಯ ಶಿಕ್ಷಣ ದಿನಾಚರಣೆ ತೋಡಾರ್ ನಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಿತು.

ಅಧ್ಯಕ್ಷತೆಯನ್ನು ಮೀಫ್ ಅಧ್ಯಕ್ಷ ಮೂಸಬ್ಬ. ಪಿ. ಬ್ಯಾರಿ ವಹಿಸಿದ್ದರು. ದಿಕ್ಸೂಚಿ ಭಾಷಣ ಮಾಡಿದ ಮೀಫ್ ಪ್ರದಾನ ಕಾರ್ಯದರ್ಶಿ ರಿಯಾಜ್ ಕಣ್ಣೂರು ಮಾತನಾಡಿ 1888 ನವೆಂಬರ್ 11 ರಂದು ಜನಿಸಿ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿ, ಧಾರ್ಮಿಕ ಅಡಿಪಾಯದ ರಾಷ್ಟ್ರೀಯತೆ ಯನ್ನು ಜಗತ್ತಿಗೆ ಅನಾವರಣಗೊಳಿಸಿದ ಹೆಗ್ಗಳಿಕೆ ಕಲಾಂ ಅವರದ್ದು. ಇವರ ದೇಶ ಸೇವೆ, ಭಾವೈಕ್ಯತೆ , ಸರ್ವ ಧರ್ಮ ಸಮನ್ವತೆಯ ಪ್ರತೀಕವಾದ ಕಲಾಂ ರವರನ್ನು ಸ್ವಾತ್ರಂತ್ಯ ಭಾರತದ ಪ್ರಥಮ ಶಿಕ್ಷಣ ಸಚಿವರಾದ ಮೌಲಾನ ಅಬುಲ್ ಕಲಾಂ ರವರ ಆದರ್ಶ ಜೀವನ ಮುಂದಿನ ಜನಾಂಗಕ್ಕೆ ಮಾದರಿಯಾಗಬೇಕು ಎಂದರು. ವೇದಿಕೆಯಲ್ಲಿ ಆದರ್ಶ ಶಿಕ್ಷಣ ಸಂಸ್ಥೆಯ ಸಂಚಾಲಕ ಎಂ.ಎಸ್. ಮಹಮ್ಮದ್, ಟ್ರಸ್ಟಿ ಅಬೂಬಕ್ಕರ್, ಮುಖ್ಯೋಪಾಧ್ಯಾಯಿನಿ ಡಾ. ಶಾಂತಿ ವಿಜಯ್, ಮೊದಲಾದವರು ಉಪಸ್ಥಿತರಿದ್ದರು. ಶಿಕ್ಷಕಿ ವಿವೆಟ್ ಡಿ ‘ಸೋಜ, ಕಾರ್ಯಕ್ರಮದ ಮಹತ್ವದ ಬಗ್ಗೆ ಶಿಕ್ಷಕಿ ರಫೀದ ಮಾಹಿತಿ ನೀಡಿದರು.ಶಿಕ್ಷಕಿ ಲತಾ ಸ್ವಾಗತಿಸಿ ವಂದಿಸಿದರು. ಮೌಲಾನ ಅಬುಲ್ ಕಲಾಂ ರವರ ಜೀವನ ಚರಿತ್ರೆ ಬಗ್ಗೆ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಿ ಸ್ಥಳದಲ್ಲೇ ಬಹುಮಾನ ವಿತರಿಸಲಾಯಿತು.

whatsapp image 2023 11 11 at 3.40.10 pm

Sponsors

Related Articles

Back to top button