ಬದರ್ ಜುಮಾ ಮಸ್ಜಿದ್ ಓಣಿಯಡ್ಕ ಪಳ್ಳತ್ತೂರ್ ಇದರ ಉದ್ಘಾಟನೆ…

ಪಳ್ಳತ್ತೂರ್: ಬದರ್ ಜುಮಾ ಮಸ್ಜಿದ್ ಓಣಿಯಡ್ಕ ಪಳ್ಳತ್ತೂರ್ ಇದರ ಉದ್ಘಾಟನೆಯನ್ನು ಸಯ್ಯದುಲ್ ಉಲಮಾ ಜಿಫ್ರಿ ಮುತ್ತುಕೋಯಾ ತಂಗಳ್ ನೆರೆವೇರಿಸಿದರು.
ಸಮಾರಂಭದಲ್ಲಿ ಜೈನಲ್ ಅಬಿದಿನ್ ತಂಗಳ್ ದುಗ್ಗಲಡ್ಕ ಅಧ್ಯಕ್ಷತೆ ವಹಿಸಿದರು. ಹಕೀಮ್ ತಂಘಲ್ ಆದೂರ್, ಕರ್ನಾಟಕ ಸ್ಪೀಕರ್ ಯು ಟಿ ಖಾದರ್, ಕೆಪಿಸಿಸಿ ಮುಖ್ಯ ವಕ್ತಾರ ಮತ್ತು ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷರಾದ ಟಿ ಎಂ ಶಾಹಿದ್ ತೆಕ್ಕಿಲ್, ಮಸ್ಜಿದ್ ನಿರ್ಮಿಸಿ ಕೊಟ್ಟ ದುಬೈ ನಿವಾಸಿ ಸಲಾಂ ಸ್ವಾಲಿಹ್, ಅಬ್ದುಲ್ಲ ಸ್ವಾಲಿಹ್, ನ್ಯಾಯವಾದಿ ಹನೀಫ್ ಹುದವಿ, ನ್ಯಾಯವಾದಿ ಮೂಸ ಕುಂಞಿ ಪೈoಬಚ್ಚಾಲ್, ಸಿದ್ದಿಕ್ ಕೊಕೊ ಮೊದಲಾದವರು ಭಾಗವಹಿಸಿದರು.