ಅರಂತೋಡು ಹರಿಯಾಲಿ ಚಿಕನ್ ಸೆಂಟರ್ ಗೆ ಭೇಟಿ ನೀಡಿದ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ…

ಸುಳ್ಯ: ಅರಂತೋಡು ಯಶಸ್ವಿ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ನೂಜಾಲು ಧರ್ಮತೇಜ ರವರ ಮಾಲಕತ್ವದ ಹರಿಯಾಲಿ ಚಿಕನ್ ಮತ್ತು ಮಟನ್ ಸೆಂಟರ್ ಗೆ ಸುಳ್ಯ ಶಾಸಕಿ ಭಾಗೀರಥಿ ಮುರಳ್ಯ ಭೇಟಿ ನೀಡಿ ದೀಪಾವಳಿ ಶುಭಾಶಯ ತಿಳಿಸಿ, ಉದ್ಯಮದ ಬಗ್ಗೆ ವಿಚಾರ ವಿನಿಮಯ ನಡೆಸಿದರು.
ಈ ಸಂದರ್ಭದಲ್ಲಿ ಶಾಸಕರೊಂದಿಗೆ ಅರಂತೋಡು- ತೊಡಿಕಾನ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಬಿಜೆಪಿ ಮುಖಂಡ ಮಹೇಶ್ ಮೇನಾಲ,ಹರಿಯಾಲಿ ಚಿಕನ್ ಎಂಡ್ ಮಟನ್ ಸೆಂಟರ್ ಮಾಲಕ ಧರ್ಮತೇಜ ನೂಜಾಲು, ತೀರ್ಥರಾಮ ಪರ್ನೋಜಿ ಉಳುವಾರು, ಯೋಗಿತಾ ಅಮೆ ತೊಡಿಕಾನ, ತಾಜುದ್ದೀನ್ ಅರಂತೋಡು ಮುಂತಾದವರು ಭಾಗವಹಿಸಿದ್ದರು.