ಕೇರಳ ಸಚಿವ ಅಹಮ್ಮದ್ ದೇವರಕೋವಿಲ್ ಪೇರಡ್ಕ ಭೇಟಿ…

ಸುಳ್ಯ: ಕೇರಳ ಸರಕಾರದ ಬಂದರು ಮತ್ತು ವಸ್ತು ಸಂಗ್ರಹಾಲಯ ಸಚಿವ ಅಹಮ್ಮದ್ ದೇವರಕೋವಿಲ್ ರವರು ಪೇರಡ್ಕ ಮುಹಿದ್ದೀನ್ ಜುಮಾ ಮಸೀದಿಗೆ ಬೇಟಿ ನೀಡಿ ಮರಣ ಹೊಂದಿದ ತೆಕ್ಕಿಲ್ ಕುಟುಂಬಸ್ಥರ ಖಬರ್ ಝಿಯಾರತ್ ಮತ್ತು ಪ್ರಾರ್ಥನಾ ಸಂಘಮದಲ್ಲಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಮಸೀದಿ ವತಿಯಿಂದ ಸಚಿವರನ್ನು ಸಂಪಾಜೆ ಗ್ರಾ.ಪಂ. ಅಧ್ಯಕ್ಷ ಜಿ.ಕೆ ಹಮೀದ್ ರವರು ಶಾಲು ಹೊದಿಸಿ ಸನ್ಮಾಸಿನಿಸಿದರು. ಖತೀಬರಾದ ಬಹು| ರಿಯಾಝ್ ಪೈಝಿ ದುವಾ ನೆರವೇರಿಸಿದರು. ಈ ಸಂಧರ್ಭದಲ್ಲಿ ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್, ಜಮಾಅತ್ ಕಾರ್ಯದರ್ಶಿ ಪಿ.ಕೆ ಉಮ್ಮರ್, ಮಾಜಿ ಅಧ್ಯಕ್ಷ ಆರಿಫ್ ತೆಕ್ಕಿಲ್ ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯ ಎಸ್.ಕೆ ಹನೀಫ್ ಮೊದಲಾದವರು ಉಪಸ್ಥಿತರಿದ್ದರು.
