ಸುಳ್ಯ- ಸುಮಾರು 5 ಕ್ವಿಂಟಲ್ ಅಕ್ಕಿ ವಿತರಣೆ….

ಸುಳ್ಯ: ನಗರ ಪಂಚಾಯತ್ ನ ಬೂಡು ಮತ್ತು ಕೆರೆಮೂಲೆ ವಾರ್ಡ್ ನಲ್ಲಿ ಲಾಕ್ ಡೌನ್ ನಿಂದಾಗಿ ತೊಂದರೆಯಲ್ಲಿರುವ 100 ಮನೆಗಳಿಗೆ ಇಂದು 5 ಕ್ವಿಂಟಲ್ ಅಕ್ಕಿಯನ್ನು ವಿತರಿಸಲಾಯಿತು.
ಲಾಲ್ ಬಹದ್ದೂರ್ ಶಾಸ್ತ್ರಿ ಸಂಘಟನೆಯ ಆಂಶಿಕ ಪ್ರಾಯೋಜಕತ್ವದಲ್ಲಿ ನಡೆದ ಈ ವಿತರಣೆಯಲ್ಲಿ ಸಂಘಟನೆಯ ಅಧ್ಯಕ್ಷ ಭೀಮ ರಾವ್ ವಾಷ್ಠರ್ ಪಾಲ್ಗೊಂಡಿದ್ದರು. ನ.ಪಂ ಸದಸ್ಯ ಎಂ.ವೆಂಕಪ್ಪ ಗೌಡ ನೇತೃತ್ವ ವಹಿಸಿದ್ದರು. ನ.ಪಂ ಮಾಜಿ ಅಧ್ಯಕ್ಷ ಎಸ್. ಸಂಶುದ್ದೀನ್, ನ.ಪಂ ಮಾಜಿ ಸದಸ್ಯರಾದ ಕೆ.ಎಂ.ಮುಸ್ತಾಫ, ಜೂಲಿಯಾ ಕ್ರಾಸ್ತಾ, ಲಾಲ್ ಬಹದ್ದೂರ್ ಶಾಸ್ತ್ರಿ ಸಂಘಟನೆಯ ಕಾರ್ಯದರ್ಶಿ ಲಕ್ಷ್ಮಣ ಶೆಣೈ ,ಪ್ರಕೃತಿ ಯುವ ಸೇವಾ ಸಂಘದ ಅಧ್ಯಕ್ಷ ಉದಯ ಜಿ.ಕೆ, ಅಬ್ದುಲ್ ಕಾಯಮ್,ನೌಶಾದ್ ಬಾರ್ಪಣೆ, ಮಧುಸೂದನ ಬೂಡು, ಉಮೇಶ್ ಬೂಡು, ಸೈಯದ್ ಪಾರೆ ಮೊದಲಾದವರು ಉಪಸ್ಥಿತರಿದ್ದರು.