ಬಂಟ್ವಾಳ – ಅಧಿಕಾರಿಯಿಂದ ಬೇಜವಾಬ್ದಾರಿಯ ಜ್ವರ ಪರೀಕ್ಷೆ ????….
ಬಂಟ್ವಾಳ: ಪುರಸಭಾ ಮುಖ್ಯಾಧಿಕಾರಿಯ ಗಮನಕ್ಕೆ ತಾರದೆ ಜ್ವರ ಪರೀಕ್ಷೆಗಿಳಿದ ಪರಿಸರ ಅಭಿಯಂತರರಾದ ಯಾಸ್ಮೀನ್ ಸುಲ್ತಾನ್, ಕೋವಿಡ್ -19 ಪರೀಕ್ಷೆಯ ವಿಚಾರದಲ್ಲಿ ಒಂದೇ ಥರ್ಮೋಮೀಟರ್ ನಲ್ಲಿ ಹಲವು ಪೌರ ಕಾರ್ಮಿಕರ ಜ್ವರ ಪರೀಕ್ಷೆ ನಡೆಸಿ ಬೇಜವಾಬ್ದಾರಿ ನಡವಳಿಕೆ ತೋರಿದ್ದಾರೆ.
ಕುದಿಯುವ ನೀರಿನಲ್ಲಿ ಥರ್ಮೋಮೀಟರ್ ಹಾಕಿ ಬಳಿಕ ಇನ್ನೊಬ್ಬರಿಗೆ ಬಳಸುವಂತೆ ನಿಯಮವಿದೆ. ಆದರೆ ಇದ್ಯಾವುದನ್ನು ನಡೆಸದೆ ಒಬ್ಬರ ಬಾಯಿಂದ ಇನ್ನೊಬ್ಬರ ಬಾಯಿಗೆ ಒಂದೇ ಥರ್ಮೋಮೀಟರ್ ಇಟ್ಟು ಫಿವರ್ ಟೆಸ್ಟ್ ನಡೆಸಿದ್ದಾರೆ.
ಈ ವಿಚಾರ ಗಮನಕ್ಕೆ ಬರುತ್ತಿದ್ದಂತೆ, ಬೇಜವಾಬ್ದಾರಿ ವರ್ತನೆ ತೋರಿದ ನಿಮ್ಮ ಮೇಲೆ ಯಾಕೆ ಕಾನೂನು ಕ್ರಮ ಕೈಗೊಳ್ಳಬಾರದು ಎಂದು ನೋಟಿಸ್ ನೀಡಲಾಗಿದ್ದು, ಮೂರು ದಿನದ ಒಳಗೆ ಲಿಖಿತ ಸಮಜಾಯಿಷಿ ನೀಡುವಂತೆ ಬಂಟ್ವಾಳ ಪುರಸಭೆಯ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಆದೇಶ ನೀಡಿದ್ದಾರೆ.