ಸುಳ್ಯ – ಜನಸಂಘದ ಸ್ಥಾಪಕ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿಯವರ ಸಂಸ್ಮರಣಾ ಕಾರ್ಯಕ್ರಮ…

ಸುಳ್ಯ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟರ ಗೆಲುವಿಗೆ ಶ್ರಮಿಸಿದ 180 ನೇ ಬೂತ್ ನ ಕೇರ್ಪಳ,ಕುರುಂಜಿ ಗುಡ್ಡೆ, ಭಸ್ಮಡ್ಕದ ಕಾರ್ಯಕರ್ತರಿಗೆ ಅಭಿನಂದನಾ ಕಾರ್ಯಕ್ರಮ ಹಾಗೂ ಜನಸಂಘದ ಸ್ಥಾಪಕ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಯವರ ಸಂಸ್ಮರಣಾ ಕಾರ್ಯಕ್ರಮ ವನ್ನು ಬೂತ್ ಸಮಿತಿ ಅಧ್ಯಕ್ಷ ದಯಾನಂದ ಕೇರ್ಪಳ ರವರ ಮನೆಯಲ್ಲಿ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಂಡಲ ಸಮಿತಿ ಕಾರ್ಯದರ್ಶಿ ವಿನಯಕುಮಾರ್ ಕಂದಡ್ಕ,ನಗರ ಬಿಜೆಪಿ ಅಧ್ಯಕ್ಷ ಕುಸುಮಾಧರ ಎ.ಟಿ. ಕಾರ್ಯದರ್ಶಿ ನಾರಾಯಣ, ಶಕ್ತಿಕೇಂದ್ರದ ಅಧ್ಯಕ್ಷ ಜಿನ್ನಪ್ಪ ಪೂಜಾರಿ,ಬೂತ್ ಸಮಿತಿ ಅಧ್ಯಕ್ಷ ದಯಾನಂದ ಕೇರ್ಪಳ,ಕಾರ್ಯದರ್ಶಿ ಧರ್ಮ ಪ್ರಕಾಶ್, ಸಂಯೋಜಕ ಚಂದ್ರಶೇಖರ ಕೇರ್ಪಳ, ಸಿಎ ಬ್ಯಾಂಕ್ ನಿರ್ದೇಶಕ ಶಿವರಾಂ ಕೇರ್ಪಳ, ನಗರ ಪಂಚಾಯತು ಸದಸ್ಯರಾದ ಪೂಜಿತಾ, ಸುಧಾಕರ ಕುರಂಜಿಭಾಗ್,ಶಶಿಕಲಾ ನೀರಬಿದರೆ, ಶಿಲ್ಪಾಸುದೇವ್,ಆರ್ ಎಸ್ ಎಸ್ ಬೆಂಗಳೂರಿನ ಪ್ರಚಾರಕ ಅವಿನಾಶ್ ಕುರುಂಜಿ ಹಾಗೂ 180 ಬೂತ್ ನ ಕೇರ್ಪಳ,ಕುರುಂಜಿಗುಡ್ಡೆ,ಭಸ್ಮಡ್ಕದ ಕಾರ್ಯಕರ್ತರು ಉಪಸ್ಥಿತರಿದ್ದರು.