SDPI ಸಂಸ್ಥಾಪನಾ ದಿನಾಚರಣೆ- ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ…

ಸುಳ್ಯ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(SDPI) ಸುಳ್ಯ ವಿಧಾನಸಭಾ ಕ್ಷೇತ್ರ ವತಿಯಿಂದ ಪಕ್ಷದ 16ನೇ ವರ್ಷದ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಅಬ್ದುಲ್ ರಝಾಕ್ ಕೆನರಾ ರವರ ಅಧ್ಯಕ್ಷತೆಯಲ್ಲಿ ಗ್ರೀನ್ ಲ್ಯಾಂಡ್ ಅರೇನಾ ಫುಟ್ಬಾಲ್ ಟರ್ಫ್ ಕೊಟ್ಯಾಡಿ ಪಳ್ಳತ್ತೂರು ಮೈದಾನದಲ್ಲಿ ಜೂ. 21 ರಂದು ನಡೆಯಿತು.

ಎಸ್‌ಡಿಪಿಐ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಪುತ್ತೂರು ಕ್ರೀಡಾಕೂಟವನ್ನು ಉದ್ಘಾಟಿಸಿದರು.

ಪಕ್ಷದ ದ.ಕ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಎಸ್‌ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಮುಖ್ಯ ಅತಿಥಿಯಾಗಿ ಆಗಮಿಸಿ ಸಂಸ್ಥಾಪನಾ ದಿನಾಚರಣೆಯ ಶುಭಾಶಯ ಕೋರಿ ಪಕ್ಷ ಕಳೆದ 15 ವರ್ಷಗಳಲ್ಲಿ ನಡೆದು ಬಂದ ಹಾದಿ ಹಾಗೂ ಇದಕ್ಕಾಗಿ ಕಾರ್ಯಕರ್ತರು ಹಾಗೂ ನಾಯಕರ ತ್ಯಾಗ ಬಲಿದಾನಗಳನ್ನು ನೆನಪಿಸಿ ಈ ಒಂದು ಸಿದ್ದಾಂತವನ್ನು ಮುನ್ನಡೆಸಿಕೊಂಡು ಹೋಗಿ ದೇಶದಲ್ಲಿ ಹಸಿವು ಮುಕ್ತ ಹಾಗೂ ಭಯ ಮುಕ್ತ ದಿನಗಳು ಬರುವ ತನಕ ವಿರಮಿಸಬಾರದೆಂದು ಕರೆ ನೀಡಿದರು.
ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಹಾಜಿ ಇಬ್ರಾಹಿಂ ಸಾಗರ್ ವಿಜೇತರಿಗೆ ಬಹುಮಾನ ವಿತರಿಸಿದರು‌.
ಕ್ರೀಡಾಕೂಟದಲ್ಲಿ ಕ್ರಿಕೆಟ್, ಥ್ರೋ ಬಾಲ್,ಲಿಂಬೆ ಚಮಚ ಓಟ, ವಿಕೆಟ್ ಸುತ್ತು ಓಟ ಹಾಗೂ ಇನ್ನಿತರ ಕ್ರೀಡೆಗಳನ್ನು ಆಯೋಜಿಸಲಾಗಿತ್ತು.ಕಾದರ್ ಮಾಡಾವು ಹಾಗೂ ಮೀರಝ್ ಸುಳ್ಯ ಕ್ರೀಡಾಕೂಟವನ್ನು ನಡೆಸಿಕೊಟ್ಟರು
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಎಸ್‌ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ಉಪಾಧ್ಯಕ್ಷ ಅಬ್ದುಲ್ ಕಲಾಂ ಸುಳ್ಯ, ಕಾರ್ಯದರ್ಶಿ ಶರೀಫ್ ನಿಂತಿಕಲ್,ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ಉಸ್ಮಾನ್ ಪುತ್ತೂರು,ನೆಟ್ಟಣಿಗೆಮುಡ್ನೂರು ಗ್ರಾಮ ಪಂಚಾಯತಿ ಸದಸ್ಯರಾದ ರಿಯಾಝ್ ಈಶ್ವರಮಂಗಲ,ಸವಣೂರು ಗ್ರಾಮ ಸಮಿತಿ ಅಧ್ಯಕ್ಷರಾದ ಹನೀಫ್ ಸವಣೂರು ಅತ್ತಿಕ್ಕರೆ,ರಫೀಕ್ ಮುಕ್ಕೂರು ಸವಣೂರು,ವಿಮೆನ್ ಇಂಡಿಯಾ ಮೂವ್ಮೆಂಟ್ ಪುತ್ತೂರು ವಿಧಾನಸಭಾ ಕ್ಷೇತ್ರಾಧ್ಯಕ್ಷೆ ಝಾಹಿದಾ ಸಾಗರ್ , ಅನಿವಾಸಿ ಭಾರತೀಯ ಬದ್ರುದ್ದೀನ್ ಗೂನಡ್ಕ ಸೇರಿದಂತೆ ಹಲವಾರು ಕಾರ್ಯಕರ್ತರು ವಿಧಾನಸಭಾ ಸಮಿತಿ ಸದಸ್ಯರು, ಬ್ಲಾಕ್ ಸಮಿತಿ,ಗ್ರಾಮ ಸಮಿತಿಯ ಪಧಾದಿಕಾರಿಗಳು ಸೇರಿದಂತೆ ಹಲವರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಎಸ್‌ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರದ ಪಕ್ಷ ಸಂಘಟನಾ ಕಾರ್ಯದರ್ಶಿ ಸಿದ್ದೀಕ್ ಸವಣೂರು ಸ್ವಾಗತಿಸಿ, ನಿರೂಪಣೆಗೈದರು. ಸುಳ್ಯ ಬ್ಲಾಕ್ ಅಧ್ಯಕ್ಷ ಮೀರಝ್ ಸುಳ್ಯ ಧನ್ಯವಾದಗೈದರು.

whatsapp image 2024 06 23 at 11.09.00 am (2)

whatsapp image 2024 06 23 at 11.09.00 am

Sponsors

Related Articles

Back to top button