ಬಿಜೆಪಿಯವರ ಸಂಕುಚಿತ ಮನೋಭಾವದಿಂದಾಗಿ ಟಿಪ್ಪು ಜಯಂತಿ ಆಚರಣೆ ಇಲ್ಲ-ಸಿದ್ದರಾಮಯ್ಯ….
ಮಂಗಳೂರು: ಬಿಜೆಪಿಯವರು ಸಂಕುಚಿತ ಮನೋಭಾವ ಹೊಂದಿದ್ದು, ಟಿಪ್ಪು ಜಯಂತಿಯನ್ನು ಮಾಡುತ್ತಿಲ್ಲ. ಕಾಂಗ್ರೆಸ್ ಆಡಳಿತದಲ್ಲಿದ್ದಾಗ ಎಲ್ಲಾ ಮಹಾತ್ಮರ ಜಯಂತಿಯನ್ನು ಆಚರಿಸಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.
ಕಾಂಗ್ರೆಸ್ಸಿನ ಹಿರಿಯ ಮುಖಂಡ ಜನಾರ್ಧನ ಪೂಜಾರಿಯವರು ಕಾಂಗ್ರೆಸ್ ಗೆ ಸಿದ್ಧರಾಮಯ್ಯ ಶನಿ ಇದ್ದ ಹಾಗೆ ಎಂಬ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಪೂಜಾರಿಯವರ ಹೇಳಿಕೆಗೆ ಯಾವುದೇ ಪ್ರತಿಕ್ರಿಯೆ ನೀಡಲ್ಲ. ಕೊನೆಗೆ ಅವರು, ಕಾಂಗ್ರೆಸ್ಸಿಗೆ ಮತ ನೀಡಿ ಎಂದಿದ್ದಾರೆ ಎಂದರು.
ಬಿಜೆಪಿಗರೆ ಕುತಂತ್ರ ಮಾಡಿ ಯಡಿಯೂರಪ್ಪನವರ ಆಡಿಯೋ ಲೀಕ್ ಮಾಡಿಸಿದ್ದಾರೆ. ಅಮಿತ್ ಶಾಗೆ ಮುಜುಗರ ಆಗಿ ಸರ್ಕಾರ ಬೀಳಬೇಕು ಅನ್ನುವ ಉದ್ಧೇಶದಿಂದ ಮಾಡಿದ್ದಾರೆ. ಉಪಚುನಾವಣೆಯಲ್ಲಿ 8 ಸ್ಥಾನವನ್ನೂ ಬಿಜೆಪಿ ಗೆಲ್ಲುವುದಿಲ್ಲ ಹಾಗಾಗಿ ಡಿಸೆಂಬರ್ ವೇಳೆಗೆ ಯಡಿಯೂರಪ್ಪ ನೇತೃತ್ವದ ಸರಕಾರ ಇರುವುದಿಲ್ಲ ಎಂದು ಹೇಳಿದರು.