ತೆಕ್ಕಿಲ್ ಪ್ರತಿಷ್ಠಾನ ವತಿಯಿಂದ 15ನೇ ವರ್ಷದ ಸೌಹಾರ್ದ ಇಫ್ತಾರ್ ಕಿಟ್ ವಿತರಣೆ…

ಸುಳ್ಯ: ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ (ರಿ )ಅರಂತೋಡು ಇದರ ವತಿಯಿಂದ ರಂಜಾನ್ ತಿಂಗಳಲ್ಲಿ ನಡೆಸುವ 15ನೇ ವರ್ಷದ ಸೌಹಾರ್ದ ಇಫ್ತಾರ್ ಕೂಟವನ್ನು ಕೊರೋನಾ ಕೋವಿಡ್ 19ರ ಮುನ್ನೆಚೆರಿಕಾ ಕ್ರಮವಾಗಿ ಯಾವುದೇ ಸಭೆ ಸಮಾರಂಭ ವನ್ನು ನಡೆಸದೆ ಅತ್ಯಂತ ಸರಳವಾಗಿ ಆಚರಿಸಿ ಆಸುಪಾಸಿನ ಸುಮಾರು 125 ಮಂದಿಗೆ ಇಫ್ತಾರ್ ಕಿಟ್ ಅನ್ನು ಮನೆ ಮನೆಗೆ ತಲುಪಿಸಲಾಯಿತು.
ಈ ಸಂಧರ್ಭದಲ್ಲಿ ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಟಿ. ಎಂ. ಶಾಹಿದ್ ತೆಕ್ಕಿಲ್, ಖತೀಬ್ ರಾದ ಹಾಜಿ ಇಸಾಕ್ ಬಾಖವಿ, ಟ್ರಸ್ಟ್ ನ ಕೋಶಾಧಿಕಾರಿ ಟಿ. ಎಂ ಜಾವೇದ್ ತೆಕ್ಕಿಲ್, ಕಾರ್ಯದರ್ಶಿ ಅಶ್ರಫ್ ಗುಂಡಿ, ತಾಜುದ್ದೀನ್ ಟರ್ಲಿ, ಹಕೀಮ್ ಪೇರಡ್ಕ, ಲತೀಫ್ ಅರಂತೋಡು ಮೊದಲಾದವರು ಉಪಸ್ಥಿತರಿದ್ದರು.

Related Articles

Back to top button