ದ.ಕ – ಬೆಳ್ತಂಗಡಿಯಲ್ಲಿ ಕ್ವಾರಂಟೈನ್ ನಲ್ಲಿದ್ದ ಯುವತಿಗೆ ಕೊರೊನಾ ಪಾಸಿಟಿವ್…

ಮಂಗಳೂರು : ಮುಂಬೈಯ ಥಾಣೆ ದೊಂಬಿವಲಿಯಿಂದ ಬಂದಿದ್ದ ಬೆಳ್ತಂಗಡಿ ತಾಲ್ಲೂಕಿನ ಅರಂಬೋಡಿ ಗ್ರಾಮದ 29 ವರ್ಷದ ಯುವತಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ .
ಯುವತಿ ಬೆಳ್ತಂಗಡಿಯ ಕ್ವಾರಂಟೈನ್ ಕೇಂದ್ರದಲ್ಲಿದ್ದಾರೆ. ದ.ಕ ಜಿಲ್ಲೆಯಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 62ಕ್ಕೆ ಏರಿದೆ. ರಾಜ್ಯದಲ್ಲಿ ಇಂದು ಮತ್ತೆ 105 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ರಾಜ್ಯದ ಒಟ್ಟಯ ಸೋಂಕಿತರ ಸಂಖ್ಯೆ 1710 ಕ್ಕೇರಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 45 ಪ್ರಕರಣ, ಹಾಸನದಲ್ಲಿ 14 ಸೋಂಕು ಪ್ರಕರಣ,ತುಮಕೂರಿನಲ್ಲಿ 8 , ಬೆಂಗಳೂರು ನಗರದಲ್ಲಿ 5 , ಚಿಕ್ಕಮಗಳೂರಿನಲ್ಲಿ 5 , ಬೆಂಗಳೂರು ಗ್ರಾಮಾಂತರದಲ್ಲಿ 4 , ಮಂಡ್ಯ ಮತ್ತು ಹಾವೇರಿಯಲ್ಲಿ ತಲಾ 3 ಸೋಂಕು ಪ್ರಕರಣಗಳು ವರದಿಯಾಗಿದೆ. ಬೀದರ್, ಧಾರವಾಡದಲ್ಲಿ ತಲಾ 2 ಸೋಂಕು ಪ್ರಕರಣ ವರದಿಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಒಂದು ಪ್ರಕರಣ ದೃಢವಾಗಿದೆ.