ಕೃಷ್ಣಾಪುರ ಮಠದ ಶ್ರೀಗಳಿಗೆ ಜೈನ ಮಠದಲ್ಲಿ ಸ್ವಾಗತ…
ಮೂಡುಬಿದಿರೆ: ಜೈನ ಕಾಶಿ ಶ್ರೀ ದಿಗಂಬರ ಜೈನ ಮಠಕ್ಕೆ ಶ್ರೀ ಶ್ರೀ ಶ್ರೀ ವಿದ್ಯಾಸಾಗರ ತೀರ್ಥ ಶ್ರೀ ಪಾದರು, ಕೃಷ್ಣಾಪುರ ಮಠ ಉಡುಪಿ ಇವರು ಪರ್ಯಾಯ ಪೂರ್ವ ಭಾವಿ ಪವಿತ್ರ ಕ್ಷೇತ್ರಗಳ ದರ್ಶನ ಮಾಡುತ್ತ ಅತಿಶಯ ಕ್ಷೇತ್ರ ಮೂಡುಬಿದಿರೆ ಶ್ರೀ ಜೈನ ಮಠ ಕ್ಕೆ ನ. 19 ರಂದು ಆಗಮಿಸಿದರು. ಈ ಸಂದರ್ಭದಲ್ಲಿ ಪೂರ್ಣ ಕುಂಭ ಸ್ವಾಗತ ಮೂಲಕ ಶ್ರೀ ಮಠದ ಶಿಷ್ಯ ವೃಂದದವರು ಉಡುಪಿ ಕೃಷ್ಣಾಪುರ ಸ್ವಾಮೀಜಿಯನ್ನು ಬರಮಾಡಿಕೊಂಡರು.
ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಶ್ರೀ ಮಠದ ಮೂಲ ಸ್ವಾಮಿ ಭಗವಾನ್ 1008ಶ್ರೀ ಪಾರ್ಶ್ಶ್ವನಾಥ ಸ್ವಾಮಿ ಕೂಶ್ಮಾoಡಿನಿ ದೇವಿ, ಪದ್ಮಾವತಿ ಅಮ್ಮ ನ ದರ್ಶನ ಮಾಡಿಸಿದರು. ಈ ಸಂದರ್ಭದಲ್ಲಿ ಶ್ರೀ ಮಠದ ಪರವಾಗಿ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ ಯವರ ಉಪಸ್ಥಿತಿಯಲ್ಲಿ ವಿನಯಾಂಜಲಿ ಸಭೆ ಏರ್ಪಡಿಸಲಾಗಿತ್ತು
ಉಭಯ ಶ್ರೀ ಶ್ರೀ ಗಳವರು ಪರಸ್ಪರ ಗೌರವ ವಿನಿಮಯ ಮಾಡಿಕೊಂಡರು. ಬಳಿಕ ಆಶೀರ್ವಾದ ನೀಡಿದ ಕೃಷ್ಣಾಪುರ ಶ್ರೀಗಳವರು ಜೈನ ಧರ್ಮಿಯರು ಅಹಿಂಸಾ ಪ್ರಿಯರು, ತತ್ವದಲ್ಲಿ ಆನೇಕಾoತ ದಿಂದ ಸಪ್ತ ಭಂಗಿ ನ್ಯಾಯದ ಮೂಲಕ ದರ್ಶನದಲ್ಲಿ ಧರ್ಮದಲ್ಲಿ ಸಾಮರಸ್ಯ ತಂದವರು, ಮೂಡುಬಿದಿರೆಯ ವರ್ತಮಾನದ ಭಟ್ಟಾರಕ ಸ್ವಾಮೀಜಿ ಜೀವನದಲ್ಲಿ ಯತವತ್ ಅಳವಡಿಸಿ ಧರ್ಮ ಸಾಮರಸ್ಯ ಮೂಡಿಸುತ್ತಿರುವುದು ಸಂತೋಷ ಎಂದು ನುಡಿದರು.
ಸ್ವಸ್ತಿಶ್ರೀ ಭಟ್ಟಾರಕರು ತಮ್ಮ ಆಶೀರ್ವಾದದಲ್ಲಿ ಉಡುಪಿ ಅಷ್ಟ ಮಠ ಗಳಲ್ಲಿ ಹಿರಿಯ ಸ್ವಾಮೀಜಿ ಕೃಷ್ಣಾ ಪುರ ಶ್ರೀ ಶ್ರೀ ಗಳು ಮೊದಲಿನಿಂದಲೂ ಪರಿಚಿತರು 1971 ರಲ್ಲಿ ದೀಕ್ಷೆ ಪಡೆದು 50 ವರ್ಷ ಸನ್ಯಾಸ ಜೀವನ ದ 2022 ರ ಪರ್ಯಾಯ ಆಚರಿಸುತ್ತಿರುದು ಸಂತೋಷ ಸಮಾಜ ಕ್ಕೆ ಅವರ ಮಾರ್ಗದರ್ಶನ ಸದಾ ಸಿಗಲಿ, ಸ್ವಾಮೀಜಿ ಯವರ ಆಗಮನ ಮುಂದೆ ಕೂಡಾ ಆಗುತ್ತಿರಲಿ ಎಂದು ಶುಭ ಹಾರೈಸಿದರು.
ಮಾಜಿ ಸಚಿವ ಅಭಯ ಚಂದ್ರ ಜೈನ್, ಶ್ರೀ ಯಂ ಬಾಹುಬಲಿ ಪ್ರಸಾದ್ ರಾಷ್ಟ್ರೀಯ ಅಂಗಾಂಗ ಪ್ರತಿಷ್ಠಾನ ಅಧ್ಯಕ್ಷ ಲಾಲ್ ಗೊಯಲ್, ಪಟ್ಣ ಶೆಟ್ಟಿ ಸುದೇಶ್, ದಿನೇಶ್ ಕುಮಾರ್ ಮುಕ್ತೇಸರ ರು, ಶ್ರೀ ಚಂದ್ರಶೇಖರ್,ಸಂಜಯಂಥ ಕುಮಾರ್ ಶೆಟ್ಟಿ, ಶ್ರೀಪತಿ ಭಟ್, ಶ್ರೀ ತಂತ್ರಿ, ರಮಣ್, ಪಣಿರಾಜ್ ಮೊದಲಾದವರು ಉಪಸ್ಥಿತರಿದ್ದರು.