ನಂದಾವರ ಚಿಕ್ಕಮೇಳ ಮಳೆಗಾಲದ ತಿರುಗಾಟ ಸಮಾರೋಪ ಸಮಾರಂಭ…

ಬಂಟ್ವಾಳ: ನಂದಾವರ ಚಿಕ್ಕಮೇಳ ಮಳೆಗಾಲದ ತಿರುಗಾಟ ಸಮಾರೋಪ ಸಮಾರಂಭ ಶ್ರೀ ನಂದಾವರ ವಿನಾಯಕ ಶಂಕರನಾರಾಯಣ ದುರ್ಗಾಂಬ ಕ್ಷೇತ್ರ ನಂದಾದೀಪ ಕಲ್ಯಾಣ ಮಂಟಪದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಅರವಿಂದ ಭಟ್ ಪದ್ಯಾಣ ಇವರ ಅಧ್ಯಕ್ಷತೆಯಲ್ಲಿ ಜರಗಿತು.
ಶುಭಾಶಂಸನೆ ಯನ್ನು ಕಲಾವಿದ ಅಶೋಕ ಶೆಟ್ಟಿ ಸರಪಾಡಿ ಮಾತನಾಡುತ್ತಾ, ಕಟೀಲು ಮೇಳದ ಕಲಾವಿದ ಭಾಸ್ಕರ ಸರಪಾಡಿ ಅವರ ಕಾರ್ಯ ಮನೆಮನೆಗೆ ಯಕ್ಷಗಾನ ಕೊಂಡೊಯ್ದು ಕಲಾಮಾತೆಯ ಸೇವೆ ಶ್ಲಾಘನೀಯ ಹಾಗೂ ಅಭಿನಂದನೀಯ ಎಂದರು. ಇದೇ ಸಂದರ್ಭದಲ್ಲಿ ಸಜಿಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಅರವಿಂದ ಭಟ್ ಪದ್ಯಾಣ, ರಮೇಶ್ ಕುಲಾಲ್ ಪನೋಲಿಬೈಲು ಉಪಸ್ಥಿತರಿದ್ದರು. ಚಿಕ್ಕ ಮೇಳ ಸಂಚಾಲಕ ಭಾಸ್ಕರ ಸರಪಾಡಿ ಇವರನ್ನು ಸನ್ಮಾನಿಸಲಾಯಿತು. ನಂತರ ಯಕ್ಷಗಾನ ಬಯಲಾಟ ಜಾಂಬವತಿ ಕಲ್ಯಾಣ ಪ್ರದರ್ಶನ ಮಾಡಲಾಯಿತು.