ಸುಳ್ಯ ವಿಧಾನ ಸಭಾ ಕ್ಷೇತ್ರದ ಮಸೀದಿ ಮತ್ತು ಮದರಸ ವಕ್ಫ್ ಆಸ್ತಿ ದುರಸ್ತಿ ಮತ್ತು ಜೀರ್ಣೋದ್ದಾರಕ್ಕೆ ವಕ್ಫ್ ಇಲಾಖೆಯಿಂದ ರೂ. 35 ಲಕ್ಷ ಅನುದಾನ ಮಂಜೂರು…
ಸುಳ್ಯ: :ಕರ್ನಾಟಕ ಸರಕಾರದ ವಕ್ಫ್ ಇಲಾಖೆಯಿಂದ ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಅಜ್ಜಾವರ ತಖ್ವಿಯತ್ತುಲ್ ಇಸ್ಲಾಂ ಜಮಾಅತ್ ಕಮಿಟಿ ಅಧೀನದ ಬದ್ರಿಯಾ ಮಸೀದಿ ಇದರ ದುರಸ್ತಿ ಮತ್ತು ಜೀರ್ಣೋದ್ದಾರಕ್ಕೆ ರೂ. 20 ಲಕ್ಷ, ಜಾಲ್ಸೂರು ಗ್ರಾಮದ ಬದ್ರಿಯಾ ಜುಮಾ ಮಸೀದಿ ಪೈಚಾರ್ ಇದರ ದುರಸ್ತಿ ಮತ್ತು ಜೀರ್ಣೋದ್ದಾರಕ್ಕೆ ರೂ. 10 ಲಕ್ಷ ಮತ್ತು ಸುಳ್ಯ ಶಾಂತಿನಗರ ಮುಸ್ಲಿಂ ವೆಲ್ ಫೇರ್ ಎಸೋಸಿಯೇಶನ್, ನೂರುಲ್ ಹುಧಾ ಮಸೀದಿ ಮತ್ತು ಮದರಸ ಕಟ್ಟಡ ಅಭಿವೃದ್ಧಿ ಕಾಮಗಾರಿಗೆ ರೂ. 5 ಲಕ್ಷ ಒಟ್ಟು ರುಪಾಯಿ. 35 ಲಕ್ಷ ಅನುದಾನವನ್ನು ಕರ್ನಾಟಕ ಸರಕಾರದ ಸರಕಾರದ ವಕ್ಫ್ ಸಚಿವರಾದ ಬಿ.ಝೆಡ್ ಝಮೀರ್ ಅಹ್ಮದ್ ಖಾನ್ ರವರು ಬಿಡುಗಡೆಗೊಳಿಸಿರುತ್ತಾರೆ. ಅವರಿಗೆ ಸರಕಾರದ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ (ಸಚಿವ ಸ್ಥಾನಮಾನ) ಟಿ ಎಂ ಶಾಹಿದ್ ತೆಕ್ಕಿಲ್ ಅಭಿನಂದನೆ ಸಲ್ಲಿಸಿದ್ದಾರೆ.






