ಆಧಾರ್ ನೋಂದಣಿ ಮತ್ತು ತಿದ್ದುಪಡಿ ಕಾರ್ಯಕ್ರಮ…

ಬಂಟ್ವಾಳ: MICE ಕಂಪ್ಯೂಟರ್ ಕಲ್ಲಡ್ಕ ಮತ್ತು ಭಾರತೀಯ ಅಂಚೆ ಇಲಾಖೆ ಪುತ್ತೂರು ಸಹಯೋಗದಲ್ಲಿ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಕಾರ್ಯಕ್ರಮ ಕಲ್ಲಡ್ಕ MICE ನಲ್ಲಿ ನಡೆಯಿತು.
ಚೈತನ್ಯ ವಾಣಿಜ್ಯ ಸಂಕೀರ್ಣದ ಮಾಲಕರಾದ ಶ್ರೀ ತಿರುಮಲೇಶ್ವರ ಭಟ್ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಪುತ್ತೂರು ಅಂಚೆ ವಿಭಾಗದ ಉಪಅಧೀಕ್ಷಕರಾದ ಲೋಕನಾಥ ಎಂ. ಆಧಾರ್ ಕಾರ್ಡ್ ನ ಬಗ್ಗೆ ವಿವರಿಸಿದರು ಬಳಿಕ ಅವರನ್ನು ಬಿಲ್ಲವ ಸಂಘದ ಪರವಾಗಿ ಸನ್ಮಾನಿಸಲಾಯಿತು. ಮೂರು ದಿವಸದ ಕಾರ್ಯಕ್ರಮದಲ್ಲಿ ಒಟ್ಟು 700 ಮಂದಿ ಇದರ ಸದುಪಯೋಗ ಪಡೆದುಕೊಂಡರು.
ಕಾರ್ಯಕ್ರಮದ ವೇದಿಕೆಯಲ್ಲಿ ಅತಿಥಿಗಳಾಗಿ ಹೋಟೆಲ್ ಲಕ್ಷ್ಮಿ ಗಣೇಶ್ ಕಲ್ಲಡ್ಕ ಇದರ ಮಾಲಕರಾದ ಎನ್. ರಾಜೇಂದ್ರ ಹೊಳ್ಳ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಚೆನ್ನಪ್ಪ ಕೋಟ್ಯಾನ್, ಪ್ರಕಾಶ್ ಪಿ ಕುರ್ಮಾನ್, ಬಿ ಕೆ ಅಣ್ಣು ಪೂಜಾರಿ, ನಾರಾಯಣ ಪೂಜಾರಿ ಬೊಳಂತೂರು, ಬಿಲ್ಲವ ಸಮಾಜ ಸೇವಾ ಸಂಘ (ರಿ )ಕಲ್ಲಡ್ಕ ವಲಯದ ಅಧ್ಯಕ್ಷರಾದ ಕೃಷ್ಣಪ್ಪ ಪೂಜಾರಿ ಕೇಪುಳಕೋಡಿ, ಕಾರ್ಯದರ್ಶಿ ರಮೇಶ್ ಪೂಜಾರಿ ಹೊಸಕಟ್ಟ ಉಪಸ್ಥಿತರಿದ್ದರು. ವಸಂತ ಪೂಜಾರಿ ಬಟ್ಟೆಹಿತ್ಲು ನಿರೂಪಿಸಿ ಸ್ವಾಗತಿಸಿದರು, ಬಿಲ್ಲವ ಮಹಿಳಾ ಸಮಾಜ ಸೇವಾ ಸಂಘ (ರಿ)ಕಲ್ಲಡ್ಕ ವಲಯ ಇದರ ಅಧ್ಯಕ್ಷರಾದ ಪುಷ್ಪ ಸತೀಶ್ ದೇವಸ್ಯ ವಂದಿಸಿದರು .

Sponsors

Related Articles

Leave a Reply

Your email address will not be published. Required fields are marked *

Back to top button