ಅನಘ್ರ್ಯ ಎ.ಆರ್ ಬರಿಮಾರು -ಈಜು ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ…
ಬಂಟ್ವಾಳ:- ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆ, ಕಲ್ಲಡ್ಕ ಇಲ್ಲಿಯ 7ನೇ ತರಗತಿಯ ವಿದ್ಯಾರ್ಥಿನಿ ಅನಘ್ರ್ಯ ಎ.ಆರ್ ಬರಿಮಾರು ಇವರು ಈಜು ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಿಂದ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಶಕ್ತಿ ವಸತಿ ಶಾಲೆ, ಶಕ್ತಿ ಪದವಿ ಪೂರ್ವ ಕಾಲೇಜು ಮತ್ತು ವಿದ್ಯಾಭಾರತಿ ದಕ್ಷಿಣಕನ್ನಡ ಜಿಲ್ಲೆ ಇದರ ಆಶ್ರಯದಲ್ಲಿ ಆ. 8 ರಂದು ಶಕ್ತಿನಗರದ ಈಜುಕೊಳದಲ್ಲಿ ಜರುಗಿದ ಜಿಲ್ಲಾ ಮಟ್ಟದ ಪ್ರಾಥಮಿಕ ವಿಭಾಗದ 14 ವರ್ಷ ವಯೋಮಾನದ ಬಾಲಕಿಯರ ಈಜುಸ್ಪರ್ಧೆಯ ಬ್ಯಾಕ್ ಸ್ಟ್ರೋಕ್ 100 ಮೀ. ನಲ್ಲಿ ದ್ವಿತೀಯ ಮತ್ತು 50 ಮೀ. ನಲ್ಲಿ ತೃತೀಯ, 50 ಮೀ ಫ್ರೀ ಸ್ಟೈಲ್‍ನಲ್ಲಿ ತೃತೀಯ ಸ್ಥಾನ ಪಡೆದಿದ್ದು, ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಜು.15 ರಂದು ಡಾ|| ಶಿವರಾಮ ಕಾರಂತ ಬಾಲವನ ಈಜುಕೊಳದಲ್ಲಿ ನಡೆದ ಕರ್ನಾಟಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಜಿಲ್ಲಾ ಪಂಚಾಯತ್ ಉಪನಿರ್ಧೇಶಕರ ಕಛೇರಿ ಪುತ್ತೂರು, ವಿವೇಕಾನಂದ ಆಂಗ್ಲಮಾಧ್ಯಮ ಶಾಲೆ ತೆಂಕಿಲ, ಪುತ್ತೂರು ಇವರ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಈಜುಸ್ಪರ್ಧೆಯ ಬ್ಯಾಕ್ ಸ್ಟ್ರೋಕ್ ನಲ್ಲಿ 100 ಮೀ. ಮತ್ತು 50 ಮೀ. ತೃತೀಯ ಪಡೆದಿರುತ್ತಾರೆ. ಗ್ರಾಮ ಪಂಚಾಯತ್ ಕಾರ್ಯದರ್ಶಿ, ತಾಲೂಕು ಪಂಚಾಯತ್ ಬಂಟ್ವಾಳ ಇಲ್ಲಿಯ ಅಶೋಕ್ ಕುಮಾರ್ ಬರಿಮಾರು ಮತ್ತು ಕೆ.ಪಿ.ಎಸ್. ಮೊಂಟೆಪದವು ಇಲ್ಲಿಯ ದೈಹಿಕ ಶಿಕ್ಷಣ ಶಿಕ್ಷಕಿ ರೋಹಿಣಿ ಬಿ. ಇವರ ಪುತ್ರಿ.