ಚುಟುಕು ಸಾಹಿತ್ಯದಿಂದ ಭಾಷಾ ಸಾಮರ್ಥ್ಯ – ಶಾಂತ ಪುತ್ತೂರು…
ಬಂಟ್ವಾಳ: ವಿದ್ಯಾರ್ಥಿಗಳು ಚುಟುಕು ಸಾಹಿತ್ಯ ಬರೆಯುವುದರಿಂದ ಭಾಷಾ ಸಾಮರ್ಥ್ಯವನ್ನು ಅಭಿವೃದ್ಧಿ ಪಡಿಸಿಕೊಳ್ಳಬಹುದು ಎಂದು ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಶಾಂತ ಪುತ್ತೂರು ಹೇಳಿದರು.
ಅವರು ಶ್ರೀರಾಮಚಂದ್ರ ಪ್ರೌಢ ಶಾಲೆ ಪೆರ್ನೆಯಲ್ಲಿ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ವತಿಯಿಂದ ಏರ್ಪಡಿಸಲಾದ ಚುಟುಕು ರಚನಾ ಕಮ್ಮಟ ಮತ್ತು ವಿದ್ಯಾರ್ಥಿ ಕವಿಗೋಷ್ಠಿಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಮುಖ್ಯೋಪಾಧ್ಯಾಯರಾದ ತಾರನಾಥ ಶೆಟ್ಟಿ ಹೆಚ್ ಕವಿಗೋಷ್ಟಿಯ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳು ಬರವಣಿಗೆಯ ಕೌಶಲ್ಯವನ್ನು ಬೆಳೆಸಿಕೊಂಡು ಒಳ್ಳೆಯ ಸಾಹಿತಿಗಳಾಗಬೇಕೆಂದು ಅವರು ಹಾರೈಸಿದರು.
ಕ.ಚು.ಸಾ.ಪ. ದ.ಕ. ಜಿಲ್ಲಾಧ್ಯಕ್ಷ ಜಯಾನಂದ ಪೆರಾಜೆ ಸಂಪನ್ಮೂಲ ವ್ಯಕ್ತಿಯಾಗಿ ಚುಟುಕು ಸಾಹಿತ್ಯ ರಚನೆಯ ಬಗ್ಗೆ ತರಬೇತಿ ನೀಡಿದರು. ವಿದ್ಯಾರ್ಥಿಗಳ ಕವಿಗೋಷ್ಠಿಯಲ್ಲಿ ಅಶ್ವಿನಿ, ದಿವ್ಯಾ, ಶಕೀಲಾ, ಜಯರಾಮ, ರಶ್ಮಿ, ಮೋಕ್ಷಿತಾ, ಲತೀಕ್ಷಾ ಭಾಗವಹಿಸಿ ಸ್ವರಚಿತ ಚುಟುಕುಗಳನ್ನು ವಾಚಿಸಿದರು.
ಚಿತ್ರಕಲಾ ಶಿಕ್ಷಕ ಚೆನ್ನಕೇಶವ ಡಿ.ಆರ್., ಶಿಕ್ಷಕರಾದ ಚಂದ್ರಹಾಸ ರೈ, ರಾಕೇಶ್ ಎ. ಉಪಸ್ಥಿತರಿದ್ದರು.