ಅರಂತೋಡಿನಲ್ಲಿ ಮುಹಮ್ಮದ್ ಪೈಗಂಬರ್ ರವರ ಜನ್ಮದಿನಾಚರಣೆ ಪ್ರಯುಕ್ತ ಮದರಸ, ವಿದ್ಯಾರ್ಥಿಗಳಿಂದ ಕಲಾ ಸಾಹಿತ್ಯಕ್ಕೆ ಚಾಲನೆ…
ಸುಳ್ಯ: ನುಸ್ರತುಲ್ ಇಸ್ಲಾಂ ಮದರಸ, ಬದ್ರಿಯಾ ಜುಮಾ ಮಸ್ಜಿದ್ ಅರಂತೋಡು ಹಾಗು ಅನ್ವಾರುಲ್ ಹುದಾ ಯಂಗ್ ಮೆನ್ಸ್ ಎಸೋಸಿಯೇಶನ್ ಇವುಗಳ ಜಂಟಿ ಆಶ್ರಯದಲ್ಲಿ ಈದ್ ಮಿಲಾದ್ ಪ್ರಯುಕ್ತ ಮದರಸ ವಿದ್ಯಾರ್ಥಿಗಳ ಕಲಾಸಾಹಿತ್ಯ ಸ್ಪರ್ಧಾ ಕಾರ್ಯಕ್ರಮಕ್ಕೆ ದುವಾ ಮೂಲಕ ಖತೀಬರಾದ ಅಲ್ ಹಾಜ್ ಇಸಾಕ್ ಬಾಖವಿ ಚಾಲನೆ ನೀಡಿದರು.
ಅಧ್ಯಕ್ಷತೆಯನ್ನು ಜಮಾಅತ್ ಅಧ್ಯಕ್ಷ ಅಶ್ರಫ್ ಗುಂಡಿ ವಹಿಸಿದರು. ಮದರಸ ಸದರ್ ಸಹದ್ ಫೈಝಿ , ಸಹಾಯಕ ಅಧ್ಯಾಪಕ ಸಾಜಿದ್ ಅಝಹರಿಯವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.
ಅತಿಥಿಯಾಗಿ ಆಗಮಿಸಿದ ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಅನ್ವಾರುಲ್ ಹುದಾ ಯಂಗ್ ಮೆನ್ಸ್ ಅಸೋಸಿಯೇಷನ್ ಗೌರವ ಅಧ್ಯಕ್ಷರಾದ ಟಿ.ಎಂ ಶಾಹಿದ್ ತೆಕ್ಕಿಲ್ ಮಾತನಾಡಿ ಪ್ರವಾದಿಯ ಆದರ್ಶದಲ್ಲಿ ಮುನ್ನಡೆಯಲು ಸಮಾಜದಲ್ಲಿ ಶಾಂತಿ ಸೌಹಾರ್ದತೆ ಕಾಪಾಡಲು ಜಾತ್ಯತೀತ ನಿಲುವಿನೊಂದಿಗೆ ಒಳ್ಳೆಯ ಧಾರ್ಮಿಕ ಲವು ಕಿಕ ಶಿಕ್ಷಣ ಪಡೆಯುವಂತೆ ಕರೆ ನೀಡಿದರು , ಎ .ಎಚ್.ವೈ.ಎ ಅಧ್ಯಕ್ಷ ಅಬ್ದುಲ್ ಮಜೀದ್,ಜಮಾಅತ್ ಕಾರ್ಯದರ್ಶಿ ಕೆ.ಎಂ. ಮೂಸಾನ್, ಮದರಸ ಮ್ಯಾನೇಜ್ ಮೆಂಟ್ ಅಧ್ಯಕ್ಷ ಅಮೀರ್ ಕುಕ್ಕುಂಬಳ,ಜಮಾತ್ ಉಪಾಧ್ಯಕ್ಷರು ಹಾಜಿ ಕೆ ಎಂ ಮೊಹಮ್ಮದ್ ಮಾಜಿ ಅಧ್ಯಕ್ಷರ ಹಾಜಿ ಅಹಮದ್ ಕುಂಞ , ಆಶಿಕ್ ಕುಕ್ಕುಂಬಳ , ಕೆ.ಎಂ. ಅಬೂಬಕ್ಕರ್ ಪಾರೆಕ್ಕಲ್, ತಾಜುದ್ದೀನ್ ಅರಂತೋಡು , ಫಸಿಲು ಮೊದಲಾದವರಿದ್ದರು.