ಬೊಳುವಾರು ಆಂಜನೇಯ ಮಂತ್ರಾಲಯದಲ್ಲಿ ನವರಾತ್ರಿ ಉತ್ಸವ ಧಾರ್ಮಿಕ ಸಭೆ….

ಪುತ್ತೂರು : ಸರ್ಕಾರ ಯಾವುದೇ ಇರಲಿ. ಆಡಳಿತ ವ್ಯವಸ್ಥೆಯಲ್ಲಿ ತಪ್ಪುಗಳು ನಡೆಯುವುದು ಸಾಮಾನ್ಯ. ಜನಪ್ರತಿನಿಧಿಗಳ ಕಾರ್ಯದಲ್ಲಿ ಕೇವಲ ತಪ್ಪುಗಳನ್ನು ಮಾತ್ರ ಹುಡುಕದೆ ಅವರು ಮಾಡುವ ಉತ್ತಮ ಕೆಲಸಗಳಿಗೆ ಪ್ರೋತ್ಸಾಹ ನೀಡಬೇಕು, ದೇಶ ಹಾಗೂ ಧರ್ಮದ ಬಗ್ಗೆ ಅರಿತು ಪ್ರತಿಯೊಬ್ಬರು ಪ್ರಾಮಾಣಿಕತೆಯಿಂದ ಕೆಲಸ ಮಾಡಿದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಪುತ್ತೂರಿನ ಖ್ಯಾತ ವೈದ್ಯ ಡಾ. ಎಂ.ಕೆ.ಪ್ರಸಾದ್ ಭಂಡಾರಿ ಅವರು ಹೇಳಿದರು.
ಬೊಳುವಾರು ಓಂ ಶ್ರೀಶಕ್ತಿ ಆಂಜನೇಯ ಮಂತ್ರಾಲಯದಲ್ಲಿ ನಡೆಯುತ್ತಿರುವ 80ನೇ ವರ್ಷದ ನವರಾತ್ರಿ ಉತ್ಸವದ ಅಂಗವಾಗಿ ಶನಿವಾರ ರಾತ್ರಿ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು
ದೇಶದ ಆರು ರಾಜ್ಯಗಳಲ್ಲಿ ಈ ಬಾರಿ ಭೀಕರ ಬರ ಸಂಭವಿಸಿದೆ. ಎಲ್ಲಾ ರಾಜ್ಯಗಳಿಗೂ ಪರಿಹಾರ ನೀಡಬೇಕಾಗಿರುವುದರಿಂದ ಕರ್ನಾಟಕ ರಾಜ್ಯಕ್ಕೆ ಪರಿಹಾರ ನೀಡುವಲ್ಲಿ ವಿಳಂಬವಾಗಿದೆ. ಇದನ್ನೇ ಪ್ರಮುಖ ವಿಚಾರವನ್ನಾಗಿ ಮುಂದಿಟ್ಟುಕೊಂಡು ಗಲಭೆ ನಡೆಸುವುದು, ಎಲ್ಲಾ ಕೆಲಸಗಳಿಗೂ ಪ್ರಧಾನಿಯನ್ನೇ ದೂಷಿಸುವುದು ಸರಿಯಲ್ಲ ಎಂದು ಅವರು ಹೇಳಿದರು.
ಬೊಳುವಾರು ಆಂಜನೇಯ ಮಂತ್ರಾಲಯ ಒಂದು ಶಕ್ತಿ ಕೇಂದ್ರ. ಭಕ್ತರು ತಮ್ಮ ಕಷ್ಟಗಳ ನಿವಾರಣೆಗೆ ಪ್ರಾರ್ಥಿಸಿ ಪರಿಹಾರ ಪಡೆಯುತ್ತಾರೆ. ಇಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಯಕ್ಷಗಾನ, ಸಂಗೀತ, ಜ್ಯೋತಿಷ್ಯ ಮೊದಲಾದ ಕ್ಷೇತ್ರಗಳಿಗೂ ಆದ್ಯತೆ ನೀಡಲಾಗಿದ್ದು, ವಿವಿಧೋದ್ದೇಶ ಕೇಂದ್ರವಾಗಿ ಬೆಳೆಯುತ್ತಿದೆ. ಮುಂದೆ ಈ ಕ್ಷೇತ್ರವು ಆಧ್ಯಾತ್ಮಿಕ ಕೇಂದ್ರವಾಗಿ ಬೆಳೆಯಬೇಕಾಗಿದೆ ಎಂದು ಅವರು ಹೇಳಿದರು.
ನಗರಸಭೆಯ ಸದಸ್ಯ ಪಿ.ಜಿ ಜಗನ್ನಿವಾಸ ರಾವ್, ನಗರ ಸಭಾ ಸದಸ್ಯ ಸಂತೋಷ್ ಕುಮಾರ್, ನಗರಸಭೆಯ ಮಾಜಿ ಸದಸ್ಯ ಸುಜೀಂದ್ರ ಪ್ರಭು ಅವರು ಅತಿಥಿಯಾಗಿ ಮಾತನಾಡಿದರು. ಆಂಜನೇಯ ಮಂತ್ರಾಲಯದ ಧರ್ಮದರ್ಶಿ ನಾರಾಯಣ ಮಣಿಯಾಣಿ ಉಪಸ್ಥಿತರಿದ್ದರು.
ನೀಲಂತ್ ಕುಮಾರ್ ಸ್ವಾಗತಿಸಿದರು.ರಂಗನಾಥ ರಾವ್ ಟಿ. ವಂದಿಸಿದರು.ಆಂಜನೇಯ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ ಕಾರ್ಯಕ್ರಮ ನಿರೂಪಿಸಿದರು.

Sponsors

Related Articles

Leave a Reply

Your email address will not be published. Required fields are marked *

Back to top button