ಸುದ್ದಿ

ಯೆನೆಪೋಯ ತಾಂತ್ರಿಕ ಮಹಾವಿದ್ಯಾಲಯ – YENSPLASH -2023 ಉದ್ಘಾಟನೆ…

ಮೂಡುಬಿದ್ರಿ: ಯೆನೆಪೋಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ತಾಂತ್ರಿಕ ಮತ್ತು ಸಾಂಸ್ಕೃತಿಕ ಹಬ್ಬ YENSPLASH -2023 ಇದರ ಉದ್ಘಾಟನೆ ಮೇ.20 ರಂದು ನಡೆಯಿತು.
ಕಾಲೇಜಿನ ಎಲ್ಲ ವಿಭಾಗಗಳ ಮುಖ್ಯಸ್ಥಸು ಹಾಗೂ ಅತಿಥಿಗಳಾಗಿ ಭಾಗವಹಿಸಿದ್ದ ಕಾಂತಾರ ಚಲನಚಿತ್ರದ ಗುರುವ ಪಾತ್ರಧಾರಿ ನಟ ಸ್ವರಾಜ್ ಶೆಟ್ಟಿ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸ್ವರಾಜ್ ಶೆಟ್ಟಿ ಅವರು ಎರಡು ದಿನಗಳ ಕಾರ್ಯಕ್ರಮಕ್ಕೆ ಶುಭಹಾರೈಸಿದರು ಹಾಗೂ ವಿದ್ಯಾರ್ಥಿಗಳು ತಮ್ಮ ಗುರಿ ತಲುಪುವ ತನಕ ಕಠಿಣ ಪರಿಶ್ರಮ ಪಡಬೇಕು ಎಂದರು.
YENSPLASH -2023 ಕಾರ್ಯಕ್ರಮ ಸಂಯೋಜಕ ಪ್ರೊ. ಪ್ರವೀಣ್ ಜಿ ಬಿ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ರೋಷನ್ ಮೆಲ್ವಿನ್ ಡಿಸೋಜಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅನ್ವಿತಾ ಕಾರ್ಯಕ್ರಮ ನಿರೂಪಿಸಿದರು.
ಎರಡು ದಿನಗಳ ಕಾಲ ರಸಪ್ರಶ್ನೆ, ಚಿತ್ರಕಲೆ, ರಂಗೋಲಿ, ಡಿಬೇಟ್, ಜಾಜ್ ಆಫ್ , ಡಾನ್ಸ್, ರೋಬೊ ವಾರ್, ರೋಬೊ ಸಾಕರ್, ಅಗ್ನಿರಹಿತ ಅಡುಗೆ, ಮೆಹಂದಿ, ಕೋಡಿಂಗ್ ಚಾಲೆಂಜ್, ಪೆನ್ಸಿಲ್ ಸ್ಕೆಚ್, ಫೇಸ್ ಪೇಂಟಿಂಗ್ ಸೇರಿದಂತೆ 30 ಕ್ಕೂ ಅಧಿಕ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ.

whatsapp image 2023 05 20 at 10.57.25 am
whatsapp image 2023 05 20 at 10.57.26 am
whatsapp image 2023 05 20 at 10.57.22 am
whatsapp image 2023 05 20 at 10.57.23 am

Advertisement

Related Articles

Back to top button