ಬಂಟ್ವಾಳ- ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕ ಮತ್ತು ಪುರೋಹಿತ ಪರಿಷತ್ ಸಭೆ…

ಬಂಟ್ವಾಳ: ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕ ಮತ್ತು ಪುರೋಹಿತ ಪರಿಷತ್ ಬಂಟ್ವಾಳ ತಾಲೂಕು ಇದರ ಸಭೆಯು ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಬಂಟ್ವಾಳ ತಾಲೂಕು ಅಧ್ಯಕ್ಷರಾದ ವೇದಮೂರ್ತಿ ಶಿವರಾಮ ಮಯ್ಯ ಅವರ ಅಧ್ಯಕ್ಷತೆಯಲ್ಲಿ ಜರಗಿತು.
ಜಿಲ್ಲಾಧ್ಯಕ್ಷರಾದ ವೇದಮೂರ್ತಿ ಕೃಷ್ಣರಾಜ ಭಟ್ ಪೊಳಲಿ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರಾದ ಕೆ ಸೂರ್ಯನಾರಾಯಣ ಭಟ್, ಜಿಲ್ಲಾ ಸಮಿತಿಯ ಬರೆಪ್ಪಾಡಿ ಶಂಕರನಾರಾಯಣ ಭಟ್, ಗುರಿಕ್ಕಾರರಾದ ಮುಗುಳಿ ತಿರುಮಲೇಶ್ವರ ಭಟ್, ರಘುರಾಮ ತಂತ್ರಿ, ಗುರುರಾಜ ತಂತ್ರಿ, ಶ್ರೀನಿಧಿ ಮುಚ್ಚಿನ್ನಾಯ, ಎನ್ ಸುಬ್ರಹ್ಮಣ್ಯ ಭಟ್ ಮೊದಲಾದವರು ಭಾಗವಹಿಸಿದ್ದರು. ನವರಾಜ ಭಟ್ ಸ್ವಾಗತಿಸಿದರು. ಎರುಂಬು ಶಂಕರನಾರಾಯಣಭಟ್ ವರದಿ ವಾಚಿಸಿದರು. ನಾರಾಯಣ ನಾವಡ ಧನ್ಯವಾದ ನೀಡಿದರು. ಮುಂದಿನ ಸಭೆಯನ್ನು ನ.25 ರಂದು ಬಿಸಿರೋಡು ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಜರುಗಿಸಲು ತೀರ್ಮಾನಿಸಲಾಯಿತು.

4d8c52f4 Bfca 4652 Af9f 3dfc84f00d58 300x225

Related Articles

Leave a Reply

Your email address will not be published. Required fields are marked *