ಕೊಡಗು – ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ…

ಕೊಡಗು: ಬಿಜೆಪಿ ಸರ್ಕಾರದ ವಿರುದ್ಧ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ ಪ್ರತಿಭಟನೆಗೆ ಕೆಪಿಸಿಸಿ ವಿರಾಜಪೇಟೆ ಕೊಡಗು ಉಸ್ತುವಾರಿ ಟಿ.ಎಂ.ಶಾಹಿದ್ ತೆಕ್ಕಿಲ್ ನೇತೃತ್ವ ವಹಿಸಿದ್ದರು.
ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಸಿಬಿಐ ಅನ್ನು ನಿರಂತರವಾಗಿ ಬಳಸುತ್ತಿದೆ. ಡಿ.ಕೆ.ಶಿವಕುಮಾರ್ ಅವರು ಕೇವಲ ಕನಕಪುರದ ಬಂಡೆಯಲ್ಲ , ಬದಲಾಗಿ ಭಾರತ ದೇಶದ ಬಂಡೆ. ಅವರನ್ನು ನೇರವಾಗಿ ಎದುರಿಸಲಾಗದೆ ಕೇಂದ್ರ ಸರಕಾರ ಸಿಬಿಐ ಅನ್ನು ದುರ್ಬಳಕೆ ಮಾಡುತ್ತಿದೆ ಎಂದರು. ಉತ್ತರಪ್ರದೇಶ ಸರ್ಕಾರವು ಹತ್ರಾಸ್ ಅತ್ಯಾಚಾರ ಸಂತ್ರಸ್ತರ ಕುಟುಂಬದವರಿಗೆ ನ್ಯಾಯ ನಿರಾಕರಿಸಿದೆ ಎಂದೂ ಅವರು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್, ಎಂ.ವೆಂಕಪ್ಪ ಗೌಡ, ಎಂ.ಎಲ್.ಸಿ ಶ್ರೀಮತಿ ವೀಣಾ ಆಚಯ್ಯ, ಶ್ರೀಮತಿ ಕೆ.ಪಿ.ಚಂದ್ರಕಲಾ ಮಾಜಿ ಡಿಸಿಸಿ ಅಧ್ಯಕ್ಷ ಶಿವು ಮಡಪ್ಪ, ಟಿ ಪಿ ರಮೇಶ್ ಮತ್ತು ಇತರ ಮುಖಂಡರು ಉಪಸ್ಥಿತರಿದ್ದರು.