ದ.ಕ – ಶನಿವಾರ ಕೊರೋನಾಕ್ಕೆ ಎಂಟು ಮಂದಿ ಬಲಿ…
ಮಂಗಳೂರು : ದ.ಕ. ಜಿಲ್ಲೆಯಲ್ಲಿ ಇಂದು(ಶನಿವಾರ ) ಕೊರೋನಾ ಸೋಂಕಿನಿಂದ 8 ಮಂದಿ ಮೃತಪಟ್ಟಿದ್ದಾರೆ.ಇದರಿಂದಾಗಿ ಜಿಲ್ಲೆಯಲ್ಲಿ ಕೊರೋನಾಕ್ಕೆ ಬಲಿಯಾದವರ ಸಂಖ್ಯೆ 115ಕ್ಕೆ ಏರಿಕೆಯಾಗಿದೆ.
ಇಂದು ಮೃತಪಟ್ಟವರ ಪೈಕಿ ಏಳು ಮಂದಿ ಮಂಗಳೂರು ತಾಲೂಕಿನವರಾದ್ದು, ಓರ್ವ ಕೇರಳದ ಕಾಸರಗೋಡು ಮೂಲದವರಾಗಿದ್ದಾರೆ.
ಮೃತರೆಲ್ಲರೂ 50ವರ್ಷ ಮೇಲ್ಪಟ್ಟವರಾಗಿದ್ದಾರೆ. ಇವರಲ್ಲಿ ಆರು ಮಂದಿ ಪುರುಷರು ಹಾಗೂ ಇಬ್ಬರು ಮಹಿಳೆಯರಿದ್ದಾರೆ. ಎಲ್ಲರೂ ವಿವಿಧ ಅನಾರೋಗ್ಯಗಳಿಂದ ಬಳಲುತ್ತಿದ್ದು, ಖಾಸಗಿ ಆಸ್ಪತ್ರೆಗಳಲ್ಲೇ ಸಾವಿಗೀಡಾಗಿದ್ದಾರೆ.