ಸಮಿ ಸಬಿನ್ಸ ಲ್ಯಾಬ್ ಸ್ಥಾಪಕರಾದ ಡಾಕ್ಟರ್ ಮುಹಮ್ಮದ್ ಮಜೀದ್ ಅವರ ನಿಧನಕ್ಕೆ ಕೆಪಿಸಿಸಿ ಸೆಕ್ರೆಟರಿ ಹಾಗು ಮುಖ್ಯ ವಕ್ತಾರ ಟಿ ಎಂ ಶಾಹಿದ್ ತೆಕ್ಕಿಲ್ ಸಂತಾಪ…
ಬೆಂಗಳೂರು: ಪ್ರಪಂಚ ಮೆಚ್ಚಿದ ವಿಜ್ಞಾನಿ ಹಲವಾರು ಔಷದ, ಮಾತ್ರೆಗಳ ತಯಾರಿಕೆ ಬಗ್ಗೆ ಸಂಶೋಧನೆ ನಡೆಸಿ ಯಶಸ್ವಿಯಾದ ಅಮೇರಿಕ ಸಹಿತ ನೂರಾರು ವಿದೇಶ ರಾಜ್ಯಗಳಲ್ಲಿ ಮಾರುಕಟ್ಟೆ,ಭಾರತದಲ್ಲಿ 15 ಸಾವಿರದಷ್ಟು ಎಕ್ರೆ ಸ್ಥಳದಲ್ಲಿ ಔಷದಿ ಗಿಡಗಳನ್ನು ಬೆಳೆಸಿ 2000 ಕ್ಕು ಮಿಕ್ಕಿ ಸಂಶೋಧಕರನ್ನು, ವಿಜ್ಞಾನಿಗಳನ್ನು ಭಾರತದಲ್ಲಿ ಮತ್ತು ವಿದೇಶದಲ್ಲಿ ಉದ್ಯೋಗ ನೀಡಿದ್ದು ಬಡವರಿಗೆ, ಕೋವಿಡ್ ಮತ್ತು ನೆರೆ ಸಂದರ್ಭದಲ್ಲಿ ಕರ್ನಾಟಕ ಹಾಗು ಕೇರಳ ರಾಜ್ಯದಲ್ಲಿ 25 ಕೋಟಿಗೂ ಮಿಕ್ಕಿ ಧನ ಸಹಾಯ ಮಾಡಿದ್ದ ವಾಣಿಜ್ಯೋದ್ಯಮಿ, ವಿಜ್ಞಾನಿ ಡಾಕ್ಟರ್ ಮುಹಮ್ಮದ್ ಮಜೀದ್ ಅವರ ಕೊಡುಗೆ ಅಮೋಘವಾಗಿದ್ದು, ಕೊಲ್ಲಮ್ ಜಿಲ್ಲೆಯಲ್ಲಿ ಹುಟ್ಟಿ ತ್ರಿವಂಡ್ರಮ್ ನಲ್ಲಿ ಫಾರ್ಮಸಿ ಕಲಿತು ಅಮೇರಿಕಾದಲ್ಲಿ ಉನ್ನತ ವ್ಯಾಸಂಗ ಉದ್ಯೋಗ ಮಾಡಿ ನಂತರ ಕರ್ನಾಟಕ ಬೆಂಗಳೂರಿನಲ್ಲಿ 1991 ರಿಂದ ಪ್ರಾರಂಬಿಸಿದ ಅವರು ಮಹಾನ್ ಸಾಧಕ ಡಾಕ್ಟರ್ ಮುಹಮ್ಮದ್ ಮಜೀದ್ ಅವರ ನಿಧನ ಔಷದಿ ಉದ್ಯಮಕ್ಕೆ ಮತ್ತು ಬಡವರಿಗೆ ತುಂಬಲಾರದ ನಷ್ಟ ನನ್ನ ಮತ್ತು ಕುಟುಂಬದ ಹಿತೈಷಿಯಾಗಿದ್ದರು ಎಂದು ಟಿ ಎಂ ಶಾಹಿದ್ ತೆಕ್ಕಿಲ್ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ. ಶಾಹಿದ್ ತೆಕ್ಕಿಲ್ ಇಂದು ಅವರ ಬೆಂಗಳೂರಿನ ಡಾಲ್ಲೋರ್ಸ್ ಕಾಲೋನಿ ನಿವಾಸಕ್ಕೆ ಭೇಟಿ ನೀಡಿ ಮೃತರ ಅಂತಿಮ ದರ್ಶನ ಪಡೆದು ಕುಟುಂಬದ ಸದಸ್ಯರಿಗೆ ಸಂತಾಪ ತಿಳಿಸಿದರು.