ಬೆಳ್ಳಾರೆಯಲ್ಲಿ ಆಟಿದ ಪೊಲಬು ಕಾರ್ಯಕ್ರಮ…

ಸುಳ್ಯ: ಕರ್ನಾಟಕ ಜರ್ನಲಿಸ್ಟ್‌ ಯೂನಿಯನ್‌ ಸುಳ್ಯ ತಾಲೂಕು, ಬೆಳ್ಳಾರೆ ಜ್ಞಾನದೀಪ ಶಿಕ್ಷಣ ತರಬೇತಿ ಮತ್ತು ಅಭಿವೃದ್ಧಿ
ಸಂಸ್ಥೆ, ಸುಳ್ಯ ತುಡರ್‌ ತುಳುಕೂಟ , ಬೆಳ್ಳಾರೆ ಟೌನ್‌ ರೋಟರಿ ಕ್ಲಬ್‌ ಸಂಯುಕ್ತಾಶ್ರಯದಲ್ಲಿ ಆಟಿದ ಪೊಲಬು ಆಚರಣೆಯು ಬೆಳ್ಳಾರೆಯಲ್ಲಿ ಆ.3 ರಂದು ನಡೆಯಿತು.
ಕರ್ನಾಟಕ ರಾಜ್ಯ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲಸಾರ್‌ ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಭಾ ಟಿಸಿದರು. ಕರ್ನಾಟಕ ಜರ್ನಲಿಸ್ಟ್‌ ಯೂನಿಯನ್‌ ಸುಳ್ಯ ತಾಲೂಕು ಅಧ್ಯಕ್ಷ ಉಮೇಶ್‌ ಮಣಿಕ್ಕಾರ ಅಧ್ಯಕ್ಷತೆ ವಹಿಸಿದ್ದರು.
ಹಿರಿಯ ದೈವ ನರ್ತಕ ಬಾಬು ಅಜಿಲ ಹಾಗೂ ಹಿರಿಯ ನಾಟಿ ವೈದ್ಯ ರಾಧಾಕೃಷ್ಣ ರೈ ಅವರನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ದ.ಕ. ಜಿಲ್ಲಾ ಜರ್ನಲಿಸ್ಟ್‌ ಯೂನಿಯನ್‌ ಅಧ್ಯಕ್ಷ ಹರೀಶ್‌ ಬಂಟ್ವಾಳ್‌, ಬೆಳ್ಳಾರೆ ಗ್ರಾ.ಪಂ. ಅಧ್ಯಕ್ಷ ಚಂದ್ರಶೇಖರ ಪನ್ನೆ, ಪೆರುವಾಜೆ ಗ್ರಾ.ಪಂ. ಅಧ್ಯಕ್ಷ ಜಗನ್ನಾಥ ಪೂಜಾರಿ , ಬೆಳ್ಳಾರೆ ಸ್ನೇಹಿತರ ಕಲಾ ಸಂಘದ ಅಧ್ಯಕ್ಷ ಸಂಜಯ್ ನೆಟ್ಟಾರು , ಬೆಳ್ಳಾರೆ ಟೌನ್‌ ರೋಟರಿ ಕ್ಲಬ್‌ ಅಧ್ಯಕ್ಷ ಪದ್ಮನಾಭ ಬೀಡು, ಬೆಳ್ಳಾರೆ ಜೇಸಿಐ ಅಧ್ಯಕ್ಷ ಪದ್ಮನಾಭ ನೆಟ್ಟಾರು, ಬೆಳ್ಳಾರೆ ಸ್ನೇಹಶ್ರೀ ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ಹೊನ್ನಮ್ಮ ಬಸ್ತಿಗುಡ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿಕ್ಷಕ ಕೇಶವ ನಾಯ್ಕ್ ಸ್ವಾಗತಿಸಿದರು. ಸುಳ್ಯ ತುಡರ್‌ ತುಳು ಕೂಟದ ಅಧ್ಯಕ್ಷ ಜೆ. ಕೆ. ರೈ ವಂದಿಸಿದರು. ಶಿವಪ್ರಸಾದ್ ಆಲೆಟ್ಟಿ ನಿರೂಪಿಸಿದರು.

D364feb4 18b6 4e99 9167 E0fc9905b7bd 300x225

5e7e720c 78c0 4e0d B413 69ad5af8a15f 300x225

0396857c B72b 4a7b A2b7 Abdd7376e774 300x168

4283831c Ee66 4fea B5af C90d452d0c9f 1 300x225

Related Articles