ಊರಿನ ತಾಯಿಯನ್ನ ಹಾಗು ಅನ್ನದಾತೆಯನ್ನ ಕಳೆದ ದುಃಖದಲ್ಲಿ ನಾವಿದ್ದೇವೆ – ಜಿ ಜಿ ನೀಲಮ್ಮನವರ ಶ್ರದ್ಧಾಂಜಲಿ ಸಭೆಯಲ್ಲಿ ಟಿ ಎಂ ಶಾಹೀದ್ ತೆಕ್ಕಿಲ್…
ಸುಳ್ಯ: ಸಂಪಾಜೆ ಗ್ರಾಮ ಪಂಚಾಯತ್ ನಾಲ್ಕನೇ ವಾರ್ಡಿನ ರಾಜಾರಾಂಪುರ ಕಾಲೋನಿಯಲ್ಲಿ ನಡೆದ ಜನಸಂಪರ್ಕ ಸಭೆ ಹಾಗು ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಜಿ ಜಿ ನೀಲಮ್ಮ ಗೂನಡ್ಕರವರಿಗೆ ಶ್ರದ್ಧಾಂಜಲಿ ಸಭೆ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ ಕೆ ಹಮೀದ್ ಗೂನಡ್ಕರವರ ಅಧ್ಯಕ್ಷತೆಯಲ್ಲಿ ನಡೆಯಿತು ಸಭೆಯಲ್ಲಿ ಒಂದು ನಿಮಿಷ ಮೌನ ಆಚಾರಿಸಲಾಯಿತು.
ಜಿ ಜಿ ನೀಲಮ್ಮನವರಿಗೆ ನುಡಿ ನಮನ ಸಲ್ಲಿಸಿ ಮಾತನಾಡಿದ ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷರಾದ ಟಿ ಎಂ ಶಾಹೀದ್ ತೆಕ್ಕಿಲ್ ಅವರು ಜಿ ಜಿ ಗಣಪಯ್ಯ ಗೌಡ ರವರು ಪಂಚಾಯತ್ ಅಧ್ಯಕ್ಷರಾಗಿ, ಅವರ ಪತ್ನಿ ನೀಲಮ್ಮನವರು ಈ ಕ್ಷೇತ್ರದ ಗ್ರಾಮ ಪಂಚಾಯತ್ ಸದಸ್ಯರಾಗಿ ಅವಿಸ್ಮರಣೀಯ ಸೇವೆ ಸಲ್ಲಿಸಿದ್ದಾರೆ. ಸಂಪಾಜೆ ಗ್ರಾಮ ಹಾಗು ಅರಂತೋಡಿನಲ್ಲಿ ಅಪಾರ ಆಸ್ತಿ ಹೊಂದಿದ್ದು ಅಂದಿನ ಸಂಪಾಜೆ ಗ್ರಾಮದ ಹಿರಿಯರಾದ ತೆಕ್ಕಿಲ್ ಮೊಹಮ್ಮದ್ ಹಾಜಿ ಹಾಗೂ ಅರಂತೋಡಿನ ಪಟೇಲರಾದ ಮುತ್ತಜ್ಜ ಅಹಮದ್ ಹಾಜಿ ಪಟೇಲ್ ರವರೊಂದಿಗಿನ ಹಳೆಯ ಸಂಬಂಧ, ರಸ್ತೆಗಳಿಗೆ ಸ್ಥಳ ನೀಡಿರುವುದನ್ನು ಮೆಲುಕು ಹಾಕಿದರು. ಭೂದಾನ ಹಾಗು ಅನ್ನದಾನಕ್ಕೆ ಮತ್ತು ಕೋಮು ಭಾವೈಕ್ಯತೆಗೆ ಹೆಸರುವಾಸಿಯಾದ ಈ ಕುಟುಂಬಕ್ಕೆ ಆದ ನೋವು ನಮ್ಮೆಲ್ಲರ ನೋವು ಆಗಿದೆ. ಅವರಿಗೆ ಪರಮಾತ್ಮ ಸದ್ಗತಿ ನೀಡಲಿ ಎಂದು ಪ್ರಾರ್ಥಿಸಿ ಅವರ ಜೀವನ ಶೈಲಿ ನಮಗೆಲ್ಲ ಮಾದರಿಯಾಗಲಿ ಎಂದು ಹಾರೈಸಿದರು.
ಗ್ರಾಮ ಪಂಚಾಯತ್ ಸದಸ್ಯ ಅಬುಸಾಲಿ ಗೂನಡ್ಕ ರವರು ಮಾತನಾಡಿ, ನಮಗೆ ಹದಿನೈದು ವರ್ಷಗಳಿಂದ ಅವರ ಪರಿಚಯವಿದ್ದು ನನ್ನನ್ನು ಮಗನಂತೆ ಪ್ರೀತಿಯಿಂದ ನೋಡಿಕೊಂಡಿದ್ದರು ಎಂದು ಸ್ಮರಿಸಿದರು.
ಸಭೆಯಲ್ಲಿ ನೀಲಮ್ಮನವರ ಜೊತೆಯಲ್ಲಿ ಪಂಚಾಯತ್ ಸದಸ್ಯರಾಗಿದ್ದ ಪಿ ಎ ಉಮ್ಮರ್ ಹಾಜಿ ಗೂನಡ್ಕ, ಉಪಾಧ್ಯಕ್ಷರಾದ ಲಿಸ್ಸಿ ಮೊನಾಲಿಸ, ಪಿ ಡಿ ಒ ಸರಿತ ಡಿ ಸೋಜ, ಕಂದಾಯ ಅಧಿಕಾರಿ ಮಿಯಸಾಬ್ ಮುಲ್ಲ, ಅರಣ್ಯಾಧಿಕಾರಿ ಚಂದ್ರು ,ಮೆಸ್ಕಂನ ಅಭಿಷೇಕ್, ನರೇಗಾದ ನಮಿತಾ, ಸಜ್ಜನ ಪ್ರತಿಷ್ಟಾನದ ರಹೀಂ ಬೀಜದಕಟ್ಟೆ ಸದಸ್ಯರಾದ ಸುಮತಿ ಶಕ್ತಿವೆಲು ಅನುಪಮ ಎಸ್ ಕೆ ಹನೀಫ್ ,ಸುಂದರಿ ಮುಂಡಡ್ಕ, ವಿಮಲಾ ಪ್ರಸಾದ್, ಸವದ್ ಗೂನಡ್ಕ, ಕಮ್ಯುನಿಟಿ ಹೆಲ್ತ್ ಆಫೀಸರ್ ಹರ್ಷಿತಾ, ನೀಲಮ್ಮ ಅವರ ಮಕ್ಕಳಾದ ಶಿವ ಹಾಗೂ ಚಂದ್ರವಿಲಾಸ (ರಾಜ) ಮೊದಲಾದವರು ಉಪಸ್ಥಿತರಿದ್ದರು. ಎಲ್ಲರಿಗೂ ಊಟದ ವ್ಯವಸ್ಥೆ ಏರ್ಪಡಿಸಲಾಗಿತ್ತು. ಪಂಚಾಯತ್ ಸದಸ್ಯ ಎಸ್ ಕೆ ಹನೀಫ್ ಧನ್ಯವಾದ ಅರ್ಪಿಸಿದರು.