ಪೇರಡ್ಕ ತೆಕ್ಕಿಲ್ ಮಹಮ್ಮದ್ ಹಾಜಿ ತಕ್ಷ್ವಿಯತುಲ್ ಇಸ್ಲಾಂ ಮದ್ರಸ – ದಫ್ಫ್ ರಾತಿಬಿಗೆ ಚಾಲನೆ…
ಸುಳ್ಯ: ಪೇರಡ್ಕ ತೆಕ್ಕಿಲ್ ಮಹಮ್ಮದ್ ಹಾಜಿ ತಕ್ಷ್ವಿಯತುಲ್ ಇಸ್ಲಾಂ ಮದ್ರಸದಲ್ಲಿ ದಫ್ಫ್ ರಾತಿಬಿಗೆ ಚಾಲನೆ ನೀಡುವ ಕಾರ್ಯಕ್ರಮವನ್ನು ಜಮಾಯತ್ ಖತೀಬ್ ಬಹು. ರಿಯಾಜ್ ಫೈಝಿ ಉದ್ಘಾಟನೆ ಮಾಡಿದರು.
ದುಹಾ ಕಾರ್ಯಕ್ರಮಕ್ಕೆ ಬಹು ಹಕೀಮ್ ತಂಗಳ್ ಆದೂರ್ ನೇತೃತ್ವ ವಹಿಸಿದರು. ಜಮಾಯತ್ ಅಧ್ಯಕ್ಷರಾದ ಟಿ. ಎಂ ಶಾಹಿದ್ ತೆಕ್ಕಿಲ್ ದಫ್ಫ್ ಕಾರ್ಯಕ್ರಮಕ್ಕೆ ಶುಭ ಕೋರಿದರು. 1977 ರಲ್ಲಿ ಸ್ಥಾಪನೆಗೊಂಡ ಸಂಸ್ಥೆಯ ಕಾರ್ಯಕ್ರಮದ ಬಗ್ಗೆ ಅವರು ವಿವರಿಸಿದರು. ದಫ್ಫ್ ಉಸ್ತಾದ್ ರಝಕ್ ಹಾಜಿ ದಫ್ಫ್ ರಾತಿಬ್ ನೇತೃತ್ವ ವಹಿಸಿ ನಡೆಸಿಕೊಟ್ಟರು. ಸಹ ಉಸ್ತಾದ್ ಹಸೈನಾರ್ ಮುಸ್ಲಿಯಾರ್, ಮುಹಿಯದ್ದಿನ್ ರಿಪಾಯಿ ದಫ್ಫ್ ಅಸೋಸಿಯೇಷನ್ ಅಧ್ಯಕ್ಷರಾದ ಜಿ. ಕೆ. ಹಮೀದ್ ಗೂನಡ್ಕ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಘದ ಪ್ರದಾನ ಕಾರ್ಯದರ್ಶಿ ಅಬ್ದುಲ್ ಖಾದರ್ ಮೊಟ್ಟಂಗಾರ್, ಹಕೀಮ್ ಮೊಟ್ಟಂಗಾರ್, ಅಮಿರ್ ದರ್ಕಾಸ್, ಅಮಿರುದ್ದಿನ್ ಗೂನಡ್ಕ, ಹಸೈನಾರ್ ದೊಡ್ಡಡ್ಕ ಹಾಜಿ ಇಬ್ರಾಹಿಂ ಮೈಲ್ ಕಲ್, ಅಲ್ತಾಫ್, ರಝಕ್ ಹಾಜಿ ತೆಕ್ಕಿಲ್, ಜಮಾಯತ್ ಉಪಾಧ್ಯಕ್ಷರಾದ ಹನೀಫ್ ಟಿ. ಬಿ. ಪ್ರದಾನ ಕಾರ್ಯದರ್ಶಿ ಪಿ. ಕೆ. ಉಮ್ಮರ್, ಕಾರ್ಯದರ್ಶಿ ಉಸ್ಮಾನ್ ಮೊಯಿದು ದರ್ಕಾಸ್, ಅಶ್ರಫ್ ದೇಲಂಬಾಡಿ, ಇರ್ಫಾನ್,ಇಬ್ರಾಹಿಂ ನಡುಬೈಲ್, ಹನೀಫ್ ಮೊಟ್ಟಂಗಾರ್, ಬಾತೀಶ ಶೆಟ್ಟಿಯಡ್ಕ, ಇಬ್ರಾಹಿಂ ಪೇರಡ್ಕ, ಇಬ್ರಾಹಿಂ ಚೇರೂರ್ ಉಪಸ್ಥಿತರಿದ್ದರು.