ಮಾಲತಿ ಶೆಟ್ಟಿ ಮಾಣೂರು ರವರಿಗೆ “ಪಂಪ ಸದ್ಭಾವನ “ರಾಜ್ಯ ಪ್ರಶಸ್ತಿ…

ಮಂಗಳೂರು:ರಂಗ ಸಂಭ್ರಮ 2025 ಕಾರ್ಯಕ್ರಮವು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಏ. 5 ರಂದು ಸಂಜೆ 5:00 ಗಂಟೆಗೆ ನಡೆಯಲಿದ್ದು ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ್ ಜೋಶಿ ಅವರು ಉದ್ಘಾಟಿಸುವರು. ಈ ಸಂದರ್ಭದಲ್ಲಿ ನಾಡಿನ ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸುವರು.
ಮಂಗಳೂರಿನ ಅಮೃತ ಪ್ರಕಾಶ ಪತ್ರಿಕೆಯ ಸಂಪಾದಕಿ ಡಾ.ಮಾಲತಿ ಶೆಟ್ಟಿ ಮಾಣೂರು ಅವರಿಗೆ ಸಾಹಿತ್ಯ ಸೇವೆಗಾಗಿ ಪ್ರತಿಷ್ಠಿತ “ಪಂಪ ಸದ್ಭಾವನಾ” ರಾಜ್ಯ ಪ್ರಶಸ್ತಿಯನ್ನು ನಿವೃತ ಲೋಕಾಯುಕ್ತ ಹಾಗೂ ನ್ಯಾಯಮೂರ್ತಿಗಳಾದ ಎನ್ ಸಂತೋಷ ಹೆಗ್ಡೆ ಅವರು ಪ್ರಧಾನ ಮಾಡುವರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾದ ಕೆವಿ ನಾಗರಾಜ್ ಬೆಂಗಳೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ಬಲವಂತರಾವ್ ಪಾಟೀಲ್, ನಿವೃತ್ತ ಡಿ.ಸಿ ಡಾ. ಡಿ ವಿಶ್ವನಾಥ್ ,ಡಾ ಲಕ್ಷ್ಮೀದೇವಿ ಬೆಂಗಳೂರು ವೀರೇಶ್ ಮುತಿನ ಮಠ.,ಕೆಂಚನೂರು ಶಂಕರ್ ಉಪಸ್ಥಿತರಿರುವರು.
ಡಾ.ಮಾಲತಿ ಶೆಟ್ಟಿ ಮಾಣೂರು ಅವರು ಕಳೆದ 19 ವರುಷದಿಂದ ಸಾಹಿತ್ಯ , ಪತ್ರಿಕೋದ್ಯಮ, ಸಮಾಜ ಸೇವೆ ,ಸಂಘಟನೆಯಲ್ಲಿ, ಸಕ್ರಿಯರಾಗಿದ್ದು 9 ಕೃತಿಗಳನ್ನು ಬರೆದಿದ್ದಾರೆ. ಇತರ ಸಾಹಿತಿಗಳ 42 ಕೃತಿಗಳನ್ನು ಬಿಡುಗಡೆಗೊಳಿಸಿದ್ದಾರೆ. ಪತ್ರಿಕೆಯ ವತಿಯಿಂದ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಉಚಿತವಾಗಿ ಸಾಹಿತ್ಯ ಅಭಿರುಚಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡಿದ್ದಾರೆ. ಈಗಾಗಲೇ ಹಲವಾರು ರಾಜ್ಯ, ರಾಷ್ಟ್ರ, ಪ್ರಶಸ್ತಿಗಳು ಅವರಿಗೆ ಪ್ರಾಪ್ತವಾಗಿದೆ.