ಅರಂತೋಡು – ಈದ್ ಮಿಲಾದ್ ಆಚರಣೆ…
ಸುಳ್ಯ: ಅರಂತೋಡು ಬದ್ರಿಯಾ ಜುಮ್ಮಾಮಸೀದಿ ಹಾಗೂ ಅನ್ವಾರುಲ್ ಹುದಾ ಯಂಗ್ ಮೆನ್ಸ್ ಎಸೋಸಿಯೆಶನ್ ಅರಂತೋಡು ಇದರ ಜಂಟಿ ಅಶ್ರಯದಲ್ಲಿ ವಿಶ್ವ ಪ್ರವಾದಿ ಮಹಮ್ಮದ್ ಮುಸ್ತಫಾ (ಸ.ಅ)ರವರ ಜನ್ಮ ದಿನಾಚರಣೆಯನ್ನು ಅ.29 ರಂದು ಆಚರಿಸಲಾಯಿತು.
ಬೆಳಿಗ್ಗೆ ಸುಬಹಿ ನಮಾಜಿನ ನಂತರ ನೆಬಿಯವರ ಮದ್ ಹ್ ,ಸ್ವಲಾತ್ ಆಲಾಪನೆ ನಡೆಯಿತು . ನಂತರ ಬೆಳಿಗ್ಗೆ 7.00 ಗಂಟೆಗೆ ಜಮಾ ಅತ್ ಅಧ್ಯಕ್ಷ ಹಾಜಿ ಅಶ್ರಫ್ ಗುಂಡಿ ಯವರು ಧ್ವಜಾರೋಹಣಗೈದು, ಖತೀಬರಾದ ಬಹು ಅಲ್ ಹಾಜ್ ಇಸ್ಹಾಕ್ ಬಾಖವಿ ದುವಾ ನೇರವೇರಿಸಿದರು.ಕಳೆದ ಸಾಲಿನ ಮದರಸ ವಿದ್ಯಾರ್ಥಿಗಳಿಗೆ ನಡೆದ ವಾರ್ಷಿಕ ಪಬ್ಲಿಕ್ ಪರೀಕ್ಷೆಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಜಮಾ ಅತ್ ಮಾಜಿ ಅಧ್ಯಕ್ಷರುಗಳಾದ ಹಾಜಿ ಅಹ್ಮದ್ ಪಠೇಲ್,ಹಾಜಿ ಕೆ.ಎಮ್ ಮಹಮ್ಮದ್ ,ಅಬ್ದುಲ್ ಖಾದರ್ ,ಹಾಜಿ ಮಹಮ್ಮದ್ ಎಸ್.ಇ.,ಅನ್ವಾರುಲ್ ಹುದಾ ಯಂಗ್ ಮೆನ್ಸ್ ಅಧ್ಯಕ್ಷ ಮಜೀದ್,ಕಾರ್ಯದರ್ಶಿ ಫಸೀಲು,ಜಮಾ ಅತ್ ಪದಾಧಿಕಾರಿಗಳಾದ ಎ.ಹನೀಫ್,ಮನ್ಸೂರ್ ಪಾರೆಕ್ಕಲ್, ಕೆ.ಎಮ್ .ಮೈೂದು ಕುಕ್ಕುಂಬಳ,ಬದುರುದ್ದೀನ್ ಪಠೇಲ್,ಮದರಸ ಸಂಚಾಲಕ ಅಮೀರ್ ಕುಕ್ಕುಂಬಳ,ಎಸ್ ಕೆ ಎಸ್ ಎಸ್ ಎಫ್ ಅಧ್ಯಕ್ಷ ತಾಜುದ್ದೀನ್ ಅರಂತೋಡು,ಕಾರ್ಯದರ್ಶಿ ಜುಬೈರ್,ಜಾವೇದ್ ತೆಕ್ಕಿಲ್,ಹಾಜಿ ಅಜರುದ್ದೀನ್, ಗಲ್ಫ್ ಸಮಿತಿಯ ಸದಸ್ಯರಾದ ಕೆ.ಎಮ್.ಉಸ್ಮಾನ್,ಅಸ್ಲಂ ಪಠೇಲ್,ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.ಮದರಸ ಮುಖ್ಯ ಉಪಾಧ್ಯಾಯ ನವಾಜ್ ದಾರಿಮಿ ಸ್ವಾಗತಿಸಿ ಜಮಾ ಅತ್ ಕಾರ್ಯದರ್ಶಿ ಕೆ.ಎಮ್ . ಮೂಸಾನ್ ವಂದಿಸಿದರು.ನಂತರ ಅನ್ನದಾನ ನಡೆಯಿತು.