ಎಸ್ ಕೆಪಿಎ ಬಂಟ್ವಾಳ ವಲಯದಿಂದ ಗೋಪಾಲ ಅಂಚನ್ ವೈದ್ಯಕೀಯ ಚಿಕಿತ್ಸೆಗೆ ಆರ್ಥಿಕ ನೆರವು…
ಬಂಟ್ವಾಳ: ಕಳೆದ ಮೂರೂವರೆ ವರ್ಷಗಳಿಂದ ಅನಾರೋಗ್ಯದಲ್ಲಿರುವ ಪತ್ರಕರ್ತ, ರಂಗನಿರ್ದೇಶಕ ಗೋಪಾಲ ಅಂಚನ್ ಅವರ ವೈದ್ಯಕೀಯ ಚಿಕಿತ್ಸೆಗೆ ಸೌತ್ ಕೆನರಾ ಪೊಟೋಗ್ರಾಫರ್ಸ್ ಅಸೋಶಿಯೇಶನ್ ಬಂಟ್ವಾಳ ವಲಯದ ವತಿಯಿಂದ ಆರ್ಥಿಕ ನೆರವು ನೀಡಲಾಯಿತು.
ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ನಡೆದ ಎಸ್ ಕೆಪಿಎ ಬಂಟ್ವಾಳ ವಲಯದ ರಜತ ಸಂಭ್ರಮದ ಸಮಾರೋಪ ಹಾಗೂ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ನೆರವು ಹಸ್ತಾಂತರಿಸಲಾಯಿತು.
ನೂತನ ಅಧ್ಯಕ್ಷ ರಾಜೇಂದ್ರ ಕೆ. ಕಾರ್ಯದರ್ಶಿ ರವಿ ಕಲ್ಪಣೆ, ಕೋಶಾಧಿಕಾರಿ ಕೃಷ್ಣರಾವ್, ಇತರ ಪದಾಧಿಕಾರಿಗಳು, ಅತಿಥಿಗಳು ಉಪಸ್ಥಿತರಿದ್ದರು.





