ಶಿಸ್ತಿನಿಂದ ಕಲಿತು ಗುರಿ ಸಾಧಿಸಬೇಕು-ಸುರೇಶ್ ಬಾಳಿಗ…
ಬಂಟ್ವಾಳ,ಜ.28: ಭವಿಷ್ಯದಲ್ಲಿ ಸಾಧನೆ ಮಾಡಲು ನಿಶ್ಚಿತ ಗುರಿ ಇಟ್ಟುಕೊಂಡು ಸತತ ಅಧ್ಯಯನ ಅಗತ್ಯ . ಶಿಸ್ತಿನಿಂದ ಅಭ್ಯಾಸ ಮಾಡಿ ಪರೀಕ್ಷೆಯಲ್ಲಿ ಪಡೆಯುವ ಅಂಕಗಳು ಮುಂದಿನ ವಿದ್ಯಾಭ್ಯಾಸದ ಆಯ್ಕೆಗೆ ಸಹಕಾರಿಯಾಗಿತ್ತದೆ ಎಂದು ಎಸ್.ವಿ.ಎಸ್.ದೇವಳ ಸಂಸ್ಥೆ ಗಳ ಸಂಚಾಲಕ ಸುರೇಶ ವಿ.ಬಾಳಿಗಾರವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಅವರು ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲ ಗಂಗಾಧರ ಆಳ್ವರು ಮಾತನಾಡಿ ವಿದ್ಯಾರ್ಥಿಗಳು ಕಷ್ಟಪಟ್ಟು ಕಲಿತರೆ ಒಳ್ಳೆಯ ಉದ್ಯೋಗವನ್ನು ಪಡೆಯುವ ಅವಕಾಶವಿದೆಯೆಂದರು.
ಹಿರಿಯ ಉಪನ್ಯಾಸಕ ಜಯಾನಂದ ಪೆರಾಜೆ ಮಾತನಾಡಿ ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸಕ್ಕೆ ಪದವಿ ಪೂರ್ವ ಶಿಕ್ಷಣ ಅಡಿಪಾಯವಿದ್ದಂತೆ ಎಂದು ಶುಭಹಾರೈಸಿದರು.
ಶಾಲಾ ಆಡಳಿತ ಮಂಡಳಿ ಸದಸ್ಯರಾದ ಶಿವಾನಂದ ಬಾಳಿಗ,ಭಾಮಿ ಲಕ್ಷ್ಮಣ ಶೆಣೈ, ಸುಬ್ರಾಯ ನಾಯಕ್ ಉಪಸ್ಥಿತರಿದ್ದರು.ಉಪನ್ಯಾಸಕರಾದ ವೆಂಕಟೇಶ ನಾಯಕ್ ,ಮಂಜುನಾಥ ಶೆಣೈ,ಅಲೆನ್ ಡೊನಾಲ್ಡ್ ರೆಬೆಲ್ಲೊ ಕಾರ್ಯಕ್ರಮ ಸಂಯೋಜಿಸಿದರು.ವಿದ್ಯಾರ್ಥಿ ನಾಯಕಿಯರಾದ ವೇದಿಕಾ,ರಾಜರಾಜೇಶ್ವರಿ ಅನಿಸಿಕೆ ವ್ಯಕ್ತ ಪಡಿಸಿದರು.ಮೋಕ್ಷಿತಾ ನಿರೂಪಿಸಿ,ವಿಭಾ ಸ್ವಾಗತಿಸಿದರು.ತನುಶ್ರಿ ವಂದಿಸಿದರು.





