ವೈಷ್ಣವಿ ಬಿ.ಜೆ ಅವರಿಗೆ ರಸಾಯನ ಶಾಸ್ತ್ರದಲ್ಲಿ ಡಾಕ್ಟರೇಟ್…

ಕೊಡಗು: ಬೆಂಗಳೂರಿನ ಪೂರ್ಣಪ್ರಜ್ಞಾ ಇನ್‌ಸ್ಟಿಟ್ಯೂಟ್ ಆಫ್ ಸೈಂಟಿಫಿಕ್ ರಿಸರ್ಚ್‌ನ ಸಂಶೋಧನಾ ವಿದ್ಯಾರ್ಥಿನಿ ವೈಷ್ಣವಿ ಬಿ.ಜೆ ಅವರಿಗೆ Heterogeneos Catalysis ಕ್ಷೇತ್ರದಲ್ಲಿ ಡಾ. ಗಣಪತಿ ವಿ. ಶಾನಭಾಗ್ ಅವರ ಗೌರವಾನ್ವಿತ ಮಾರ್ಗದರ್ಶನದಲ್ಲಿ “Designing Novel Catalysts for Conversion Furfuryl Alcohol and Levulinic Acid into Value Added Chemicals ” ಎಂಬ ವಿಷಯದಲ್ಲಿ ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ ಡಾಕ್ಟರೇಟ್ ಪದವಿ ನೀಡಿದೆ.

ವೈಷ್ಣವಿ ಬಿ.ಜೆ ಅವರು ಪ್ರತಿಷ್ಠಿತ ಅಂತರರಾಷ್ಟ್ರೀಯ ನಿಯತಕಾಲಿಕಗಳಲ್ಲಿ ನಾಲ್ಕು ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ ಹಾಗೂ ಇನ್ನೂ ಮೂರು ಹಸ್ತಪ್ರತಿಗಳು ಪ್ರಸ್ತುತ ಪ್ರಕಟಣೆಯ ಹಂತದಲ್ಲಿದೆ. ಅವರು ಪ್ರಸಿದ್ಧ ಅಂತರರಾಷ್ಟ್ರೀಯ ಪ್ರಕಾಶಕರಾದ ಸ್ಪ್ರಿಂಗರ್-ನೇಚರ್ ಮತ್ತು ಎಲ್ಸೆವಿಯರ್ ಅವರೊಂದಿಗೆ ಎರಡು ಪುಸ್ತಕ ಅಧ್ಯಾಯಗಳಿಗೆ ಸಹ-ಲೇಖಕರಾಗಿದ್ದಾರೆ.
ಅವರ ಸಂಶೋಧನೆಗಳನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಮ್ಮೇಳನಗಳಲ್ಲಿ ಆರು ಅತ್ಯುತ್ತಮ ಪ್ರಸ್ತುತಿ ಪ್ರಶಸ್ತಿಗಳೊಂದಿಗೆ ಗುರುತಿಸಲಾಗಿದೆ.
ವೈಷ್ಣವಿ ಬಿ.ಜೆ ಅವರ ಶೈಕ್ಷಣಿಕ ಉತ್ಕೃಷ್ಟತೆಯನ್ನು ಗುರುತಿಸಿ, ಭಾರತ ಸರ್ಕಾರದ ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (CSIR) ನಿಂದ ಅವರಿಗೆ ಪ್ರತಿಷ್ಠಿತ ಹಿರಿಯ ಸಂಶೋಧನಾ ಫೆಲೋಶಿಪ್ ನೀಡಲಾಗಿದೆ.
ವೈಷ್ಣವಿ ಬಿ.ಜೆ ಅವರು ಸುಂಟಿಕೊಪ್ಪ ಸರಕಾರಿ ಪ.ಪೂ ಕಾಲೇಜು ಪ್ರೌಢ ಶಾಲಾ ವಿಭಾಗದ ಶಿಕ್ಷಕಿ ಚಿತ್ರ ಎಸ್ ಆರ್ ಮತ್ತು ಕುಶಾಲನಗರದ ಉದ್ಯಮಿ ಜನಾರ್ಧನ ಬಿ ಆರ್ ಅವರ ಪುತ್ರಿ. ಸುಳ್ಯ ತಾಲೂಕು ಮಂಡೆಕೋಲು ಗ್ರಾಮದ ಸುಬ್ರಮಣ್ಯ ಬಿ ಎಸ್ ಅವರ ಪತ್ನಿ.

whatsapp image 2023 07 25 at 4.16.31 pm
Sponsors

Related Articles

Back to top button