ಪಾಣೆಮಂಗಳೂರು ಸ್ಥಳೀಯ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ 2022-23 ನೇ ಸಾಲಿನ ಮಹಾಸಭೆ…

ಬಂಟ್ವಾಳ: ಪಾಣೆಮಂಗಳೂರು ಸ್ಥಳೀಯ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ 2022-23 ನೇ ಸಾಲಿನ ಮಹಾಸಭೆಯು ಪಾಣೆಮಂಗಳೂರು ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ಶ್ರೀ ರೋ|ಪ್ರಕಾಶ್ ಕಾರಂತ ನರಿಕೊಂಬು ಇವರ ಅಧ್ಯಕ್ಷತೆಯಲ್ಲಿ ಎಸ್ ವಿ ಎಸ್ ಹಿರಿಯ ಪ್ರಾಥಮಿಕ ಶಾಲೆ ಪಾಣೆಮಂಗಳೂರು ಇಲ್ಲಿ ಜು. 25 ರಂದು ಜರಗಿತು.
ಈ ಸಂದರ್ಭದಲ್ಲಿ ಜಿಲ್ಲಾ ಮತ್ತು ರಾಜ್ಯ ಮಟ್ಟದ ಸ್ಕೌಟ್ ಚಟುವಟಿಕೆಗಳ ವಾಷಿ೯ಕ ಯೋಜನೆ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ನಂತರ ಮೂಡಬಿದ್ರೆಯಲ್ಲಿ ಜರಗಿದ ರಾಜ್ಯಮಟ್ಟದ ಸಾಂಸ್ಕ್ರತಿಕ ಜಾಂಬೂರಿಯಲ್ಲಿ ಭಾಗವಹಿಸಿದ ಸ್ಥಳೀಯ ಸಂಸ್ಥೆಯ ಐದು ಶಾಲೆಗಳ ಸ್ಕೌಟರ್ ರವರನ್ನು ಸನ್ಮಾನಿಸಲಾಯಿತು.
ಮುಂದಿನ ದಿನಗಳಲ್ಲಿ ಸ್ಥಳೀಯ ಸಂಸ್ಥೆಯ ಬೆಳ್ಳಿಹಬ್ಬದ ಪ್ರಯುಕ್ತ ವಿಶೇಷರ್ಯಾಲಿ ನಡೆಸುವುದು, ವುಡ್ ಬ್ಯಾಡ್ಜ್ ತರಬೇತುದಾರರ ಮೀಟ್ ನಡೆಸುವುದೆಂದು ತೀಮಾ೯ನಿಸಲಾಯಿತು.
ವೇದಿಕೆಯಲ್ಲಿ ರಾಜ್ಯ ಸಹಾಯಕ ಸಂಘಟನಾ ಆಯುಕ್ತರಾದ ಶ್ರೀ ಭರತ್ ರಾಜ್ ಕೆ, ಸಮಿತಿ ಸದಸ್ಯರಾದ ಶ್ರೀಮತಿ ಲೀಲಾ,ಶ್ರೀಮತಿ ಶ್ವೇತಾ ಕಾಮತ್ ಮುಖ್ಯ ಶಿಕ್ಷಕರು ಎಸ್ ಎಲ್ ಎನ್ ಪಿ ಶಾಲೆ ಪಾಣೆಮಂಗಳೂರು,ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಶ್ರೀ ಜಯಂತ್ ನಾಯಕ್, ಉಪಸ್ಥಿತರಿದ್ದರು.
ಸಭೆಯಲ್ಲಿ ಪಾಣೆಮಂಗಳೂರು ಸ್ಥಳೀಯ ಸಂಸ್ಥೆಯ ಶಾಲೆಯಿಂದ ಸ್ಕೌಟರ್ ಗೈಡರ್ ಗಳು ಭಾಗವಹಿಸಿದ್ದರು.
ಜೊತೆ ಕಾರ್ಯದರ್ಶಿ ಶ್ರೀ ನೂರುದ್ದೀನ್ ಸ್ವಾಗತಿಸಿ,ಸ್ಕೌಟರ್ ಸಂಗೀತ ಶಮ೯ ವಂದಿಸಿದರು.
