ಪ್ರವಾದಿ (ಸ.ಅ) ನಿಂದಕರನ್ನು ಬಂಧಿಸುವಂತೆ ಟಿ.ಎಂ ಶಹೀದ್ ಆಗ್ರಹ – SKSSF ವತಿಯಿಂದ ಮನವಿ…

ಸುಳ್ಯ: ಮುಸ್ಲಿಂ ಸಮುದಾಯದ ವಿರುದ್ದವಾಗಿ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯ, ಪ್ರಚೋದನಾಕಾರಿ ಹೇಳಿಕೆ ಹಾಗೂ ಪ್ರವಾದಿ (ಸ-ಅ)ನಿಂದನೆಯನ್ನು ವಿರೋಧಿಸಿ SKSSF ಸುಳ್ಯ ವಲಯ ವತಿಯಿಂದ ಪ್ರತಿಭಟನೆ ನಡೆಸಿ ನಂತರ ಸುಳ್ಯ ತಹಶೀಲ್ದಾರ್ ಅವರಿಗೆ ಮನವಿ ನೀಡಲಾಯಿತು. ಈ ಸಂದರ್ಭದಲ್ಲಿ ಪ್ರವಾದಿ (ಸ.ಅ) ನಿಂದಕರನ್ನು ಬಂಧಿಸುವಂತೆ ಟಿ.ಎಂ ಶಹೀದ್ ಆಗ್ರಹ.
ನಿಯೋಗದಲ್ಲಿ ರಾಜ್ಯ ಕಾಂಗ್ರೆಸ್ ನಾಯಕ ಟಿ.ಎಂ ಶಹೀದ್, ವಾಗ್ಮಿ ಇಕ್ಬಾಲ್ ಬಾಳಿಲ, SKSSF ಸುಳ್ಯ ವಲಯಾದ್ಯಕ್ಷ ಕೆ.ಎಸ್ ಜಮಾಲುದ್ದೀನ್, ಕಾರ್ಯದರ್ಶಿ ಅಕ್ಬರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು