ಖ್ಯಾತ ಭಾಗವತ ಪದ್ಯಾಣ ಗಣಪತಿ ಭಟ್ ಇನ್ನಿಲ್ಲ….

ಸುಳ್ಯ: ತೆಂಕುತಿಟ್ಟು ಯಕ್ಷರಂಗದ ಖ್ಯಾತ ಭಾಗವತ ಪದ್ಯಾಣ ಗಣಪತಿ ಭಟ್ಟರು(66 ) ಇಂದು ಬೆಳಿಗ್ಗೆ ವಿಧಿವಶರಾಗಿದ್ದಾರೆ.
ಪದ್ಯಾಣ ತಿರುಮಲೇಶ್ವರ ಭಟ್ ಮತ್ತು ಸಾವಿತ್ರಿ ದಂಪತಿಯ ಮೂರನೇ ಮಗನಾಗಿ 1955 ರಲ್ಲಿ ಜನಿಸಿದ ಪದ್ಯಾಣ ಗಣಪತಿ ಭಟ್ಟರು ಕಳೆದ ನಾಲ್ಕು ದಶಕಗಳಿಂದ ತೆಂಕುತಿಟ್ಟಿನ ಯಕ್ಷಗಾನ ಭಾಗವತಿಕೆ ಕ್ಷೇತ್ರದಲ್ಲಿ ಅಗ್ರಮಾನ್ಯ ಕಲಾವಿದರಾಗಿ ಪ್ರಸಿದ್ಧಿ ಗಳಿಸಿದ್ದಾರೆ.
ಕುಂಡಾವು, ಚೌಡೇಶ್ವರಿ, ಸುರತ್ಕಲ್‌, ಮಂಗಳಾದೇವಿ, ಕರ್ನಾಟಕ, ಎಡನೀರು, ಹೊಸನಗರ ಮೇಳಗಳಲ್ಲಿ ಪ್ರಧಾನ
ಭಾಗವತರಾಗಿ ಸೇವೆ ಸಲ್ಲಿಸಿರುವ ಪದ್ಯಾಣ ಗಣಪತಿ ಭಟ್‌ರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಸಸ್ತಿ ಸಂದಿದೆ. ದುಬೈ, ಮಸ್ಕತ್‌, ಕುವೈತ್‌ ಮೊದಲಾದ ವಿದೇಶಗಳಲ್ಲೂ ಕಲಾಪ್ರದರ್ಶನ ನೀಡಿ ಸನ್ಮಾನಿತರಾಗಿದ್ದಾರೆ.

93aad0e5 461b 46a3 8714 7c6e1897632c 300x176

654db2f0 1329 4f3d 939e 9dc3d6b666a1 282x300

Related Articles