ದೆಹಲಿಯಲ್ಲಿ ಸಾಹಿತ್ಯೋತ್ಸವ -2019 ಚುಟುಕು ಕವಿಗೋಷ್ಠಿ….

ಬಂಟ್ವಾಳ :ಚುಟುಕು ಸಾಹಿತ್ಯವು ಸಮಾಜದ ಅಂಕು ಡೊಂಕುಗಳನ್ನು ತಿದ್ದುವಂತಿರಬೇಕು. ಆದರೆ ಮನ ನೋಯಿಸದಂತೆ ಜೀವನೋತ್ಸಾಹವನ್ನು ಮೂಡಿಸಲಿ ಎಂದು ಪಾಣೆಮಂಗಳೂರು ಶ್ರೀ ಶಾರದಾ ಪ್ರೌಢ ಶಾಲೆಯ ಸಂಚಾಲಕ ಚುಟುಕು ಕವಿ ವೇ.ಮೂ.ಜನಾರ್ದನ ಭಟ್ ಮೊಗರ್ನಾಡು ಹೇಳಿದರು.
ಅವರು ದೆಹಲಿ ಕರ್ನಾಟಕ ಸಂಘ ಮತ್ತು ದ.ಕ. ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ವತಿಯಿಂದ ನವದೆಹಲಿ ಕರ್ನಾಟಕ ಸಭಾಭವನದಲ್ಲಿ ಏರ್ಪಡಿಸಲಾದ ಅಂತಾರಾಜ್ಯ ಮಟ್ಟದ ಚುಟುಕು ಸಾಹಿತ್ಯ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕವಿಗೋಷ್ಠಿಯಲ್ಲಿ ಸರಕಾರಿ ಪದವಿಪೂರ್ವ ಕಾಲೇಜು ಕನ್ಯಾನದ ಕನ್ನಡ ಭಾಷಾ ಶಿಕ್ಷಕಿ ಶಾಂತಾ ಪುತ್ತೂರು, ಉಪನ್ಯಾಸಕ ಪತ್ರಕರ್ತ ಜಯಾನಂದ ಪೆರಾಜೆ, ಚಂದ್ರಿಕಾ ಡಿ. ಕೈರಂಗಳ ,ಸುರೇಖ ಯಳವಾರ ಬಂಟ್ವಾಳ, ವಿಜಯಲಕ್ಷ್ಮೀ ಕಟೀಲು, ಮಲ್ಲಿಕಾ ಜೆ. ರೈ ಪುತ್ತೂರು, ಆಕೃತಿ ಎಸ್. ಭಟ್ ಮಂಗಳೂರು, ಬದ್ರುದ್ದೀನ್ ಕೂಳೂರು, ಅಪರ್ಣ ಆಳ್ವ, ಗುಣವತಿ ಕಿನ್ಯ , ಪ್ರಮೀಳ ಚುಳ್ಳಿಕಾನ, ಪ್ರಭಾವತಿ ಕೆದಿಲಾಯ ,ಪ್ರೇಮ ಉದಯ ಕುಮಾರ್, ಕುಶಾಲಾಕ್ಷಿ ಕಣ್ವತೀರ್ಥ, ಹರೀಶ ಸುಲಾಯ ಒಡ್ಡಂಬೆಟ್ಟು, ಅಭ್ಯುದಯ ಜೈನ್ ಸೇರಿದಂತೆ 28 ಮಂದಿ ಕವಿಗಳು ಸ್ವರಚಿತ ಕವನಗಳನ್ನು ವಾಚಿಸಿದರು.
ಅತಿಥಿಗಳಾಗಿ ಚು.ಸಾ.ಪ ಕಡಬ ವಲಯ ಗೌರವಾಧ್ಯಕ್ಷ ಜಯಾನಂದ ಪೆರಾಜೆ, ಪತ್ರಕರ್ತ ರಾಧಾಕೃಷ್ಣ ಕೆ. ಉಳಿಯತಡ್ಕ, ಸುಭಾಶ್ ಪೆರ್ಲ, ಶಿಕ್ಷಕ ಹ.ಸು. ಒಡ್ಡಂಬೆಟ್ಟು , ಪರಿಸರ ಪ್ರೇಮಿ ಮಾಧವ ಉಳ್ಳಾಲ, ಡಾ. ಜಗದೀಶ ಶೆಟ್ಟಿ ಬಿಜೈ ಭಾಗವಹಿಸಿದ್ದರು.
ದ.ಕ. ಜಿಲ್ಲಾ ಚು.ಸಾ.ಪ ಗೌರವಾಧ್ಯಕ್ಷ ಇರಾ ನೇಮು ಪೂಜಾರಿ, ಅಧ್ಯಕ್ಷ ತಾರನಾಥ ಬೋಳಾರ,ದೆಹಲಿ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ , ವಸಂತ ಶೆಟ್ಟಿ ಬೆಳ್ಳಾರೆ,ಅಧ್ಯಕ್ಷ ಡಾ. ವೆಂಕಟಾಚಲ ಜಿ ಹೆಗ್ಡೆ, ಉಪಾಧ್ಯಕ್ಷ ಡಾ. ಅವನೀಂದ್ರ ರಾವ್, ಕಾರ್ಯದರ್ಶಿ ಸಿ.ಎಮ್. ನಾಗರಾಜ ,ಕವಿ ಸುಭಾಷ್ ಪೆರ್ಲ, ಡಾ. ರತ್ನ ಹಾಲಪ್ಪ ಗೌಡ ಉಪಸ್ಥಿತರಿದ್ದು ಶುಭ ಹಾರೈಸಿದರು.

Sponsors

Related Articles

Leave a Reply

Your email address will not be published. Required fields are marked *

Back to top button