ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕ್ಯಾಂಪಸ್ ನೇಮಕಾತಿ….
ಪುತ್ತೂರು: ನಗರದ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಂತಿಮ ವರ್ಷದ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ನೇಮಕಾತಿ ಪ್ರಕ್ರಿಯೆಯು ಯಶಸ್ವಿಯಾಗಿ ನಡೆಯುತ್ತಿದ್ದು ಸೆಫ್ಟಂಬರ್ ಅಂತ್ಯದ ವೇಳೆಗೆ 15 ಕಂಪೆನಿಗಳು ಕಾಲೇಜಿಗೆ ಭೇಟಿ ನೀಡಿದ್ದವು. ಕಂಪ್ಯೂಟರ್ ಸೈನ್ಸ್, ಇನ್ಫಾರ್ಮೇಶನ್ ಸೈನ್ಸ್, ಇಲೆಕ್ಟ್ರಾನಿಕ್ಸ್, ಮೆಕ್ಯಾನಿಕಲ್, ಸಿವಿಲ್ ವಿಭಾಗದ ಅರ್ಹ ವಿದ್ಯಾರ್ಥಿಗಳು ಇದರಲ್ಲಿ ಪಾಲ್ಗೊಂಡರು.
ಭಾರತೀಯ ನೌಕಾದಳ, ಟಿಸಿಎಸ್, ಅಬ್ಯೆಟಿ ಟೆಕ್ನಾಲಜೀಸ್, ಡೆಲ್‍ಟಾಕ್ಸ್, ಎಸ್‍ಎಪಿ ಲ್ಯಾಬ್, ಕೆಡೆನ್ಸ್ ಸಿಸ್ಟಮ್ಸ್, ಹ್ಯಾಶೌಟ್ ಸಾಫ್ಟ್‍ವೇರ್, ಎರಾಡ್ಲ್ ಕೋವರ್ಕಿಂಗ್ ಸ್ಪೇರ್ಸ್, ನವೀಯ ಲ್ಯಾಬ್ಸ್, 99ಗೇಮ್ಸ್, ರೋಬೋಸಾಫ್ಟ್ ಟೆಕ್ನಾಲಜಿ, ಡಾರ್ವಿನ್ ಬಾಕ್ಸ್ ಡಿಜಿಟಲ್ ಸೊಲ್ಯುಶನ್ಸ್, ಎಂಫಾಸಿಸ್ ಲಿಮಿಟೆಡ್ ಮತ್ತು ನೋಡ್ ಟೆಕ್ನಾಲಜಿ ಕಂಪೆನಿಗಳ ನೇಮಕಾತಿ ಪ್ರಕ್ರಿಯೆಯು ನಡೆಯಿತು. ಇದರಲ್ಲಿ ಎಸ್‍ಎಪಿ ಲ್ಯಾಬ್ ಕಂಪೆನಿಯ ಪ್ರಕ್ರಿಯೆಗೆ ವಿವೇಕಾನಂದ ಪದವಿ ಕಾಲೇಜಿನ ವಿದ್ಯಾರ್ಥಿಗಳು, ಕೆಡೆನ್ಸ್ ಸಿಸ್ಟಮ್ಸ್‍ನ ಪ್ರಕ್ರಿಯೆಯಲ್ಲಿ ಮಂಗಳೂರು ವಿಭಾಗದ 13 ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಮತ್ತು ರೋಬೋಸಾಫ್ಟ್ ಟೆಕ್ನಾಲಜಿಯ ಪ್ರಕ್ರಿಯೆಯಲ್ಲಿ 4 ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರಕ್ರಿಯೆಯು ಇನ್ನೂ ನಡೆಯುತ್ತಿದ್ದು ಫಲಿತಾಂಶಕ್ಕಾಗಿ ಕಾಯಲಾಗುತ್ತಿದೆ.
ಕಾಲೇಜಿನ ತರಬೇತಿ ಮತ್ತು ನೇಮಕಾತಿ ವಿಭಾಗವು ಅವಿರತವಾಗಿ ಶ್ರಮಿಸುತ್ತಿದ್ದು ಇನ್ನೂ ಹೆಚ್ಚಿನ ಕಂಪೆನಿಗಳು ನೇಮಕಾತಿಗಾಗಿ ಆಗಮಿಸಲಿವೆ ಎಂದು ಪ್ರಾಂಶುಪಾಲ ಡಾ.ಎಂ.ಎಸ್.ಗೋವಿಂದೇಗೌಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.