ಸುದ್ದಿ

ಉಚಿತ ಕಣ್ಣಿನ ತಪಾಸಣಾ ಶಿಬಿರ…

ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳ ಮತ್ತು ರೋಟರಿ ಕ್ಲಬ್ ಉಪ್ಪಿನಂಗಡಿಯ ಸಹಭಾಗಿತ್ವದಲ್ಲಿ ಆನಂದಾಶ್ರಮ ಸೇವಾ ಟ್ರಸ್ಟ್, ಪುತ್ತೂರು ಮತ್ತು ಆರೋಗ್ಯ ಇಲಾಖೆ ಬಂಟ್ವಾಳ ಇದರ ಸಂಯುಕ್ತ ಆಶ್ರಯದಲ್ಲಿ ತಜ್ಞ ವೈದ್ಯರಿಂದ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ನಮ್ಮ ಕ್ಲಬ್ ಹಾಲ್ ನಲ್ಲಿ ನಡೆಸಲಾಯಿತು.
65 ಜನರು ಇದರ ಪ್ರಯೋಜನ ಪಡೆದು, 25 ಜನರಿಗೆ ಉಚಿತ ಕನ್ನಡಕ ವಿತರಿಸಲಾಯಿತು.ಇಂದು ವೆನ್ಲಾಕ್ ಆಸ್ಪತ್ರೆಯಲ್ಲಿ 11ಮಂದಿಗೆ ಕ್ಯಾಟರಾಕ್ಟ್ ಸರ್ಜರಿ ನಡೆಸಲಾಯಿತು.ಈ ಯಶಸ್ವಿ ಕಾರ್ಯಕ್ರಮಕ್ಕೆ ಸಹಕಾರ ನೀಡಿದ Rtn ಶಾಂತರಾಜ್, ಡಾಕ್ಟರ್ ಗೌರಿ ಪೈ, ವೆನ್ಲಾಕ್ ಆಸ್ಪತ್ರೆಯ ತಜ್ಞ ವೈದ್ಯರ ತಂಡ ಅಭಿನಂದನಾರ್ಹರು.
ಈ ಕಾರ್ಯಕ್ರಮದಲ್ಲಿ AG ಮಂಜುನಾಥ ಆಚಾರ್ಯ,Rtn ರಿತೇಶ್ ಬಾಳಿಗ,Rtn ರಾಮಣ್ಣ ರೈ,Rtn ಭಾನುಶಂಕರ್,Rtn ವಸಂತ ಪ್ರಭು, ಉಪ್ಪಿನಂಗಡಿ ರೋಟರಿ ಕ್ಲಬ್ ನ ಅಧ್ಯಕ್ಷ ಜಗದೀಶ್ ನಾಯಕ್ ಹಾಗೂ ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ಪುಷ್ಪರಾಜ್ ಹೆಗ್ಡೆ ಭಾಗವಹಿಸಿದ್ದರು.

Advertisement

Related Articles

Back to top button