ಪೋಷಣ ಪಕ್ವಾಡ್ ಅಭಿಯಾನ…
ಬಂಟ್ವಾಳ: ಭಾರತೀಯ ಜನತಾ ಪಾರ್ಟಿ ಬಂಟ್ವಾಳ ಮಹಿಳಾ ಮೋರ್ಚಾದ ವತಿಯಿಂದ ಜ.17 ರಂದು ನರಿಕೊಂಬು ಮಹಾಶಕ್ತಿ ಕೇಂದ್ರದ ಗೊಳ್ತಮಜಲು ಗ್ರಾಮದ ನೇತಾಜಿ ಯುವಕ ಮಂಡಲದಲ್ಲಿ ಪೋಷಣ ಪಕ್ವಾಡ್ ಅಭಿಯಾನ ಮಾಡಲಾಯಿತು.
ಕಾರ್ಯಕ್ರಮವನ್ನು ವಂದೇ ಮಾತರಂ ಗೀತೆಯೊಂದಿಗೆ ಪ್ರಾರಂಭಿಸಲಾಯಿತು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ಸರಸ್ವತಿ ಉದ್ಘಾಟನೆಯನ್ನು ಮಾಡಿದರು. ಅವರು ಹುಟ್ಟಿದ ಮಗುವಿನಿಂದ ಹಿಡಿದು ಪ್ರಾಯದ ವರೆಗೆ ತೆಗೆದುಕೊಳ್ಳುವ ಪೌಷ್ಟಿಕ ಆಹಾರದ ಬಗ್ಗೆ ಮಾಹಿತಿ ನೀಡಿದರು. ಯೋಗದಿಂದ ವೈಯಕ್ತಿಕ ಸಮಸ್ಯೆ , ಕೌಟುಂಬಿಕ ಸಮಸ್ಯೆ , ಸಾಮಾಜಿಕ ಸಮಸ್ಯೆ , ರಾಷ್ಟ್ರದ ಸಮಸ್ಯೆ , ವಿಶ್ವದ ಸಮಸ್ಯೆ ಪರಿಹಾರವಾಗುತ್ತದೆ. ನಮ್ಮ ದಿನಚರಿಯನ್ನು ಯೋಗದಿಂದ ಪ್ರಾರಂಭಿಸಬೇಕು ಎಂದು ಅವರು ಹೇಳಿದರು.
ನಂತರ ರಾಜ್ಯದ ನೀರು ಮತ್ತು ಒಳಚರಂಡಿ ನಿಗಮದ ಸದಸ್ಯೆ ಸುಲೋಚನ ಜಿಕೆ ಭಟ್ ಮಾತನಾಡಿ, ನಮ್ಮ ರಾಷ್ಟ್ರಕ್ಕೆ ಒಳ್ಳೆಯ ನಾಯಕತ್ವ ಸಿಕ್ಕಿದೆ ಇದು ನಮ್ಮ ಭಾಗ್ಯ ಎಂದರು.
ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷೆ ಧನಲಕ್ಷ್ಮಿ ಗಟ್ಟಿಯವರು ಸನ್ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸ್ವಚ್ಛ ಭಾರತಕ್ಕೆ ಹೆಚ್ಚಿನ ಆದ್ಯತೆ ಕೊಟ್ಟಿದ್ದಾರೆ. ಅವರು ನೀಡಿರುವ ಎಲ್ಲಾ ಯೋಜನೆಗಳನ್ನು ಪ್ರತಿ ಮನೆ ಹೆಣ್ಣು ಮಕ್ಕಳಿಗೆ ತಲುಪಿಸುವ ಜವಾಬ್ದಾರಿಯನ್ನು ಮಹಿಳಾ ಮೋರ್ಚಾ ಮಾಡಬೇಕು ಮತ್ತು ಬಡ ಮಹಿಳೆಯರನ್ನು ಗುರುತಿಸಿ ನಮ್ಮಿಂದ ಆಗುವ ಸಹಾಯ ಮಾಡಬೇಕು ಎಂದರು.
ಬಂಟ್ವಾಳ ಮಹಿಳಾ ಮೋರ್ಚಾ ಕ್ಕೆ ಹೊಸತಾಗಿ ಪ್ರಭಾರಿಯಾಗಿ ಬಂದ ಮಮತಾ ಕೇಶವರನ್ನು ಈ ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.
ಬಂಟ್ವಾಳ ಮಹಿಳಾ ಮೋರ್ಚಾದ ಅಧ್ಯಕ್ಷೆ ಭಾರತಿ ಚೌಟ ಅಧ್ಯಕ್ಷೀಯ ಭಾಷಣವನ್ನು ಮಾಡಿದರು. ಪ್ರಧಾನ ಕಾರ್ಯದರ್ಶಿ ಸೀಮಾ ಮಾಧವ ಸ್ವಾಗತ ಮಾಡಿದರು ಮೋರ್ಚಾದ ಉಪಾಧ್ಯಕ್ಷೆ ಲಕ್ಷ್ಮಿ ಪ್ರಭು ಧನ್ಯವಾದ ಹೇಳಿದರು ಪ್ರಧಾನ ಕಾರ್ಯದರ್ಶಿ ಲಕಿತ ಆರ್ ಶೆಟ್ಟಿ ನಿರೂಪಣೆ ಮಾಡಿದರು ವೇದಿಕೆಯಲ್ಲಿ ಜಿಲ್ಲಾ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಸೇವಂತಿ ಶ್ರೀಯಾನ್ ,ಶ್ರೀಮತಿ ವಿಜಯ ಬಾಳ್ತಿಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹಿರಣ್ಮಯಿ, ಮಹಿಳಾ ಮೋರ್ಚಾ ಪ್ರಭಾರಿ ಚಂದ್ರಾವತಿ ಪೊಳಲಿ ಮತ್ತು ಬಿಜೆಪಿ ಬಂಟ್ವಾಳ ಮಂಡಲದ ಮಹಿಳಾ ಮೋರ್ಚಾದ ಪದಾಧಿಕಾರಿಗಳು ಮತ್ತು ಕಾರ್ಯಕರ್ತೆಯರು ಉಪಸ್ಥಿತರಿದ್ದರು.